ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆ

ಮೂಲ್ಕಿ: ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಸರ್ಕಾರವು ನಿರ್ಲಕ್ಷ ಧೋರಣೆ ನಡೆಸುತ್ತಿದೆ ಎಂದು ಆರೋಪಿಸಿ ಎಬಿವಿಪಿ ನೇತೃತ್ವದಲ್ಲಿ ಮಂಗಳವಾರ ಮೂಲ್ಕಿಯ ವಿಜಯಾ ಕಾಲೇಜಿನ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ಮೂಲ್ಕಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕಳೆದ ಆರು ತಿಂಗಳಿನಲ್ಲಿ ೫೨೫ ಅತ್ಯಾಚಾರ ಪ್ರಕರಣಗಳು ನಡೆದಿದೆ, ಕೇವಲ ಒಂದು ವಾರದಲ್ಲಿ 53 ಪ್ರಕರಣಗಳು ಬೆಳಕಿಗೆ ಬಂದಿದ್ದರು ಸಾವಿರಾರು ಪ್ರಕರಣಗಳು ಮುಚ್ಚಿ ಹೋಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಅಸಹಾಯಕತೆಯನ್ನು ಪ್ರದರ್ಶಿಸುತ್ತಿರುವ ಸರ್ಕಾರವು ಕಾಮುಕರನ್ನು ಎಡೆಮುರಿ ಕಟ್ಟಲು ಸಾಧ್ಯವಿಲ್ಲದಿದ್ದರೆ ಅಧಿಕಾರದಲ್ಲಿ ಇದ್ದು ಪ್ರಯೋಜನ ಏನು ಎಂದು ಪ್ರಶ್ನಿಸಿದರು.ಕಾಮುಕರಿಗೆ ಉಗ್ರ ಶಿಕ್ಷೆ ಕೊಡಲು ಹಿಂಜರಿದಲ್ಲಿ ಹಾಗೂ ಅಪರಾದಿಗಳನ್ನು ಕೂಡಲೇ ಬಂದಿಸದಿದ್ದಲ್ಲಿ ಸರಕಾರದ ವಿರುದ್ದ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದಿಂದಿಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಎಬಿವಿಪಿಯ ಕಾಲೇಜಿನ ಮಾಜೀ ನಾಯಕ ಬಸವಲಿಂಗ, ವಿದ್ಯಾರ್ಥಿಗಳಾದ ಕೀರ್ತಿ, ವಿಜೇತ ಮಾತನಾಡಿದರು.

Kinnigoli 23071403 Kinnigoli 23071404

Comments

comments

Comments are closed.

Read previous post:
Kinnigoli 21071404
ಆಷಾಡ ಎಂದರೆ ಭಯವಿತ್ತು, ಆದರೆ ಈಗಿಲ್ಲ

ಮೂಲ್ಕಿ: ಆಷಾಡ ಮಾಸವೇ ಕಷ್ಟದ ದಿನಗಳು ಎಂಬ ಅಂಜಿಕೆ, ಭಯವಿದ್ದ ಕಾಲ ಹೋಗಿದೆ ಈಗ ಆ ತಿಂಗಳು ಸಹ ಹಬ್ಬಗಳನ್ನು ಆಚರಿಸಬಹುದು ಎಂದು ಆಟಿಡೊಂಜಿ ದಿನ, ಆಟಿದ ಗಮ್ಮತ್,...

Close