ತುಂಬಿ ತುಳುಕುತ್ತಿರುವ ಕಸ ತ್ಯಾಜ್ಯ!!

ಮೂಲ್ಕಿ: ಪರಿಸರವನ್ನು ಸ್ಚಚ್ಛವಾಗಿಡ ಬೇಕೆಂಬ ದ್ಯೇಯದೊಂದಿಗೆ ಪ್ರತೀ ಆರು ತಿಂಗಳಲ್ಲಿ ಗ್ರಾಮಸ್ಥರ ಸಭೆ ಕರೆದು ತಿಳಿ ಹೇಳುವ ಮೂಲ್ಕಿ ಸಮೀಪದ ಕಿಲ್ಪಾಡಿ ಪಂಚಾಯತಿಯ ಆವರಣ ಕಳೆದ ಹಲವಾರು ತಿಂಗಳಿನಿಂದ ತುಂಬಿ ಹೋಗುತ್ತಿದ್ದರೂ ತೆರವು ಮಾಡುತ್ತಿಲ್ಲ. ಪಂಚಾಯತಿಗೆ ತಮ್ಮ ಕೆಲಕ್ಕೆಂದು ಬರುವ ಗ್ರಾಮಸ್ಥರು ಇಲ್ಲಿನ ತ್ಯಾಜ್ಯವನ್ನು ಕಂಡು ಪಂಚಾಯತಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಕಸವನ್ನು ತೊಟ್ಟಿಗೆ ಹಾಕದೆ ಬೇಕಾಬಿಟ್ಟಿಯಾಗಿ ಬಿಸಾಡಲಾಗಿದೆ. ಪಂಚಾಯತಿಯ ಬದಿಯಲ್ಲೇ ಶಾಲೆ ಕೂಡ ಇದ್ದು ಇಲ್ಲಿನ ಗಲೀಜಿನಿಂದ ರೋಗಗಳು ಹರಡುವ ಸಾದ್ಯತೆ ಕಂಡುಬರುತ್ತಿದೆ. ಪಂಚಾಯತಿಗೆ ತಮ್ಮ ಕೆಲಸ ಕಾರ‍್ಯಕ್ಕೆಂದು ಬರುವ ಗ್ರಾಮಸ್ಥರು ಇಕ್ಕಟ್ಟಾದ ಮಾಳಿಗೆ ಮೆಟ್ಟಿಲು ಹತ್ತುವುದರಲ್ಲೇ ಅರ್ಧ ಉಸಿರು ನಿಂತು ಹೋಗಿಬಿಡುತ್ತದೆ.ಇದರೆಡೆಯಲ್ಲಿ ಇನ್ನು ತ್ಯಾಜ್ಯ ದುರ್ವಾಸನೆಯ ಮೊದಲೇ ತ್ಯಾಜ್ಯವನ್ನು ಖಾಲಿ ಮಾಡಿಸಲು ಪಂಚಾಯತ್ ಮುಂದಾಗಬೇಕಾಗಿದೆ.

Kinnigoli 23071401

Comments

comments

Comments are closed.

Read previous post:
Kinnigoli 22071404
ಸ್ವಉದ್ಯೋಗದಲ್ಲಿ ಆರ್ಥಿಕ ಸ್ವಾವಲಂಬನೆ ಸಾಧ್ಯ

ಕಿನ್ನಿಗೋಳಿ: ಸ್ವಉದ್ಯೋಗದಲ್ಲಿ ವಿಫುಲ ಅವಕಾಶಗಳಿದ್ದು ಆರ್ಥಿಕ ಸ್ವಾವಲಂಬನೆ ಸಾಧ್ಯ ಯುವ ಮಹಿಳೆಯರು ಇದನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಹೇಳಿದರು. ದಕ್ಷಿಣ...

Close