ಎಲ್ಲಾ ಮತ ಧರ್ಮಗಳ ಸಂಸ್ಕೃತಿ ತಿಳಿದುಕೊಳ್ಳಬೇಕು

ಕಿನ್ನಿಗೋಳಿ : ಸ್ನೇಹ ಸೌಹಾರ್ಧತೆ ಹಾಗೂ ಸಂಸ್ಕೃತಿ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಎಲ್ಲಾ ಮತ ಧರ್ಮಗಳ ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಮಾಜಿ ಅಧ್ಯಕ್ಷ ರಾಜೇಶ್ ಕೆಂಚನಕೆರೆ ಹೇಳಿದರು.
ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಹಾಗೂ ಅಂಗರಗುಡ್ಡೆ ಬದ್ರಿಯಾ ಮಸೀದಿಯ ಜಂಟೀ ಆಶ್ರಯದಲ್ಲಿ ಅಂಗರಗುಡ್ಡೆ ಮಸೀದಿಯ ಸಭಾಭವನದಲ್ಲಿ ಮಂಗಳವಾರ ನಡೆದ ಇಪ್ತಾರ್ ಕೂಟದಲ್ಲಿ ಮಾತನಾಡಿದರು.
ಕಿನ್ನಿಗೋಳಿ ರೋಟರ‍್ಯಾಕ್ಟ್ ಅಧ್ಯಕ್ಷ ಸಂತೋಷ್ ಕುಮಾರ್, ರೋಟರ‍್ಯಾಕ್ಟ್ ಮಾಜಿ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ಮಸೀದಿಯ ಖತೀಬರಾದ ಮುಹಮ್ಮದ್ ರಿಯಾಜ್ ದಾರಿಮಿ, ಇಮಾಮ್ ಕೌನ್ಸಿಲ್ ಜಿಲ್ಲಾ ಅಧ್ಯಕ್ಷ ಜಾಪರ್ ಪೆಝಿ , ಮುಲ್ಕಿ ಕೇಂದ್ರ ಮಸೀದಿಯ ಅಧ್ಯಕ್ಷ ಇಕ್ಬಾಲ್ ಅಹಮ್ಮದ್, ಅಂಗರಗುಡ್ಡೆ ಮಸೀದಿಯ ಅಧ್ಯಕ್ಷ ರಿಯಾಜ್ , ಕಾರ್ಯದರ್ಶಿ ನಿಸಾರ್ ಅಹಮ್ಮದ್, ಇಬ್ರಾಹಿಂ ಉಸ್ತಾದ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 24071403

Comments

comments

Comments are closed.

Read previous post:
Kinnigoli 24071402
ರಸ್ತೆಗೆ ಬಿದ್ದ ಅಶ್ವತ್ಥ ಮರ

ಕಿನ್ನಿಗೋಳಿ: ಕಿನ್ನಿಗೋಳಿ-ಕಟೀಲು ಹೆದ್ದಾರಿಯ ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನದ ಮುಂಭಾಗದಲ್ಲಿ ಬೃಹತ್ ಅಶ್ವತ್ಥ ಮರವೊಂದು ಗಾಳಿಗೆ ರಸ್ತೆಗೆ ಬಿದ್ದ ಪರಿಣಾಮ ಕೆಲ ಹೊತ್ತು ರಸ್ತೆ ಸಂಚಾರಕ್ಕೆ ಅಡಚಣೆ...

Close