ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಫ್ರೆಷರ‍್ಸ್ ಡೇ

ಮೂಲ್ಕಿ: ಯುವ ಪೀಳಿಗೆಗೆ ಸ್ವಾವಲಂಭಿ ಬದುಕಿನ ಪ್ರಥಮ ಪಾಠವನ್ನು ಹಾಸ್ಟೆಲ್ ಜೀವನ ಮಾರ್ಗದರ್ಶಿಯಾಗಿದ್ದು ಸಮಯ ಪಾಲನೆ ಏಕಾಗ್ರತೆಯ ಮೂಲಕ ಆಂತರಿಕ ದೃಡತ್ವ ಮತ್ತು ಶಿಕ್ಷಣ ಬದುಕಿನಲ್ಲಿ ಉನ್ನತಿಗಳಿಸಲು ಸಾಧ್ಯ ಎಂದು ಮೂಲ್ಕಿ ನಗರ ಪಂಚಾಯತಿ ಸದಸ್ಯ ಹರ್ಷರಾಜ ಶೆಟ್ಟಿ ಜಿಎಂ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನ ಸಭಾಂಗಣದಲ್ಲಿ ಕಾಲೇಜು ವಸತಿ ನಿಲಯ ವಿದ್ಯಾರ್ಥಿಗಳಿಂದ ನಡೆದ ಫ್ರೆಷರ‍್ಸ್ ಡೇ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೂಡು ಕುಟುಂಬ ಹಾಗೂ ಹೆತ್ತವರನ್ನು ಅವಲಂಭಿಸಿ ಬೆಳೆದ ಮಕ್ಕಳು ಪ್ರಾಥಮಿಕ ಹಂತದಲ್ಲಿ ಹಾಸ್ಟೆಲ್ ಜೀವನ ಕಷ್ಟ ಎನಿಸಿದರೂ ಸಹ ಬಾಳ್ವೆ ಮತ್ತು ಸ್ವಾವಲಂಭನೆಯಿಂದ ನಾಯಕತ್ವದ ಗುಣಗಳು ಲಭಿಸುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಿಜಯಾ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್ ವಹಿಸಿದ್ದರು.
ಹಾಸ್ಟೆಲ್ ವಾರ್ಡನ್ ಗಳಾದ ಪ್ರೊ.ಹೆಚ್.ಜಿ.ನಾಗರಾಜ ನಾಯಕ್,ಪ್ರೊ.ವೆಂಕಟೇಶ ಭಟ್ ಅತಿಥಿಗಳಾಗಿದ್ದರು. ಈ ಸಂದರ್ಭ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ ವೈವಿಧ್ಯಗಳು ನಡೆದವು. ಪ್ರೊ.ಹೆಚ್.ಜಿ.ನಾಗರಾಜ ನಾಯಕ್ ಸ್ವಾಗತಿಸಿದರು, ಹಾಲಪ್ಪ ಪರಿಚಯಿಸಿದರು,ಮೇಘನಾ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ವೆಂಕಟೇಶ ಭಟ್ ವಂದಿಸಿದರು.

Kinnigoli 23071402

Bhagyavan Sanil

Comments

comments

Comments are closed.

Read previous post:
Kinnigoli 23071401
ತುಂಬಿ ತುಳುಕುತ್ತಿರುವ ಕಸ ತ್ಯಾಜ್ಯ!!

ಮೂಲ್ಕಿ: ಪರಿಸರವನ್ನು ಸ್ಚಚ್ಛವಾಗಿಡ ಬೇಕೆಂಬ ದ್ಯೇಯದೊಂದಿಗೆ ಪ್ರತೀ ಆರು ತಿಂಗಳಲ್ಲಿ ಗ್ರಾಮಸ್ಥರ ಸಭೆ ಕರೆದು ತಿಳಿ ಹೇಳುವ ಮೂಲ್ಕಿ ಸಮೀಪದ ಕಿಲ್ಪಾಡಿ ಪಂಚಾಯತಿಯ ಆವರಣ ಕಳೆದ ಹಲವಾರು...

Close