ಲೇಖಕರಿಗೆ ಸಮಾನ ಅವಕಾಶ ನೀಡಬೇಕು

 ಕಿನ್ನಿಗೋಳಿ : ಯುಗಪುರುಷ ಪತ್ರಿಕೆಯು ನಿರಂತರವಾಗಿ ಕಿರಿಯ-ಹಿರಿಯ ಲೇಖಕರಿಗೆ ಸಮಾನ ಅವಕಾಶ ನೀಡಿದೆ. ತುಳುನಾಡಿನ ಪರಂಪರೆ ಸಾಂಸ್ಕೃತಿಕತೆಯನ್ನು ಉಳಿಸುವಲ್ಲಿ ಸಾಹಿತ್ಯದ ಕೊಡುಗೆ ಅಪಾರಗಿದ್ದು ಪತ್ರಿಕೆಗಳ ಔದಾರ್ಯತೆಯು ಜೀವನದಲ್ಲಿ ಮಾರ್ಗದರ್ಶಕವಾಗಿರಬೇಕು ಇದನ್ನು ಕಿರಿಯ ಸಾಹಿತಿಗಳು ಮುಂದುವರಿಸಿಕೊಂಡು ಹೋಗಬೇಕು ಎಂದು ಹಿರಿಯ ಸಾಹಿತಿ ಜಾನಪದ ಸಂಶೋಧಕ ಅಮೃತ ಸೋಮೇಶ್ವರ ಹೇಳಿದರು.
ಗುರುವಾರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆದ ಯುಗಪುರುಷ ಸಂಸ್ಥಾಪಕ ದಿ.ಕೊ.ಅ.ಉಡುಪರ ಸಂಸ್ಮರಣ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುಗಪುರುಷ ಸಂಸ್ಥಾಪಕ ದಿ| ಕೊ.ಅ.ಉಡುಪರ ಸಂಸ್ಮರಣಾರ್ಥ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿ ಹಾಗೂ ರೂ. 10000/- ನಗದು, ಗೌರವ ಫಲಕ, ಪ್ರಶಸ್ತಿ ಪತ್ರವನ್ನು ಹಿರಿಯ ಸಾಹಿತಿ, ಸಂಶೋಧಕ ಡಾ. ಕೆ.ಜಿ. ವಸಂತ ಮಾಧವ ಪಾವಂಜೆ ಅವರಿಗೆ ನೀಡಲಾಯಿತು. ವೇದ ವಿದ್ವಾಂಸರ ನೆಲೆಯಲ್ಲಿ ಪುರೋಹಿತ ವಾಚಸ್ಪತಿ ರೆಂಜಾಳ ಮಜಲು ವೇದಮೂರ್ತಿ ಗುರುರಾಜ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಯಿತು.
ಸುಮಾರು ೫೦೦ಕ್ಕೂ ಮಿಕ್ಕಿ ಕೃತಿಗಳನ್ನು ಸಾಹಿತ್ಯಿಕ ಲೋಕಕ್ಕೆ ಅರ್ಪಿಸಿರುವ ಕಿನ್ನಿಗೋಳಿಯ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ನೂತನ ೪ ಕೃತಿಗಳಾದ ಪಳಕಳ ಸೀತಾರಾಮ ಭಟ್ ರಚಿತ “ಚಿಕಣಿ ಹಾಡುಗಳು” ಅಮೃತ ಸೋಮೇಶ್ವರ ರಚಿತ ” ಸಂಜೆ ಪಯಣದ ಹಾಡು”, ಅನಂತ ಚಿಂತಾಮಣಿ ಜ್ಯೋತಿಷಿ ರಚಿತ “ಮಕ್ಕಳಿಗೆ ಕತೆಗಳು”, ಪ್ರಸನ್ನ ಸಚ್ಚೇರಿಪೇಟೆ ರಚಿತ “ಹನಿಬಿತ್ತನೆ ” ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.
ದಿ|| ಡಾ| ಸತೀಶ ಹೊಳ್ಳ ಸ್ಮರಣಾರ್ಥ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಅತ್ಯುತ್ತಮ ಬರವಣಿಗೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಎಂ.ಜಿ. ರಾಮಣ್ಣ ಪಕ್ಷಿಕೆರೆ, ರಾಮಚಂದ್ರ ಭಟ್, ಆರೂರು ಲಕ್ಷ್ಮೀ ರಾವ್ ಹಾಗೂ ದೇವರಾಯ ಮಲ್ಯ ಪ್ರತಿಷ್ಠಾನಕಿನ್ನಿಗೋಳಿ ಇವರ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನಗೈದರು. ಹಿರಿಯ ಸಾಹಿತಿ ಕೆ.ಜಿ.ಮಲ್ಯ ಸಂಸ್ಮರಣಾ ಭಾಷಣ ಮಾಡಿದರು. ಧನಲಕ್ಷ್ಮೀ ಕ್ಯಾಶ್ಯೂ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಶ್ರೀಪತಿ ಭಟ್, ದ.ಕ.ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು, ಯುಗಪುರುಷದ ಸಲಹೆಗಾರರಾದ ಕಮಲಾಕ್ಷಿ ಉಡುಪ, ಡಾ| ನಯನಾಭಿರಾಮ ಉಡುಪ ಅನಂತ ಉಡುಪ, ಪದ್ಮನಾಭ ಉಡುಪ ಉಪಸ್ಥಿತರಿದ್ದರು.
ಯುಗಪುರುಷದ ಪ್ರಧಾನ ಸಂಪಾದಕ, ಕೊಡೆತ್ತೂರು ಭುವನಾಭಿರಾಮ ಉಡುಪ ಪ್ರಸ್ತಾವನೆಗೈದು ಸ್ವಾಗತಿಸಿದರು. ಯಕ್ಷ ಲಹರಿಯ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಜಿಲ್ಲೆಯ ಹೆಸರಾಂತ ಕಲಾವಿದರ ಕೂಡುವಿಕೆಯಿಂದ ವಿಜಯವಾಹಿನಿ ಯಕ್ಷಗಾನ ಬಯಲಾಟ ನಡೆಯಿತು.

Kinnigoli-25071401 Kinnigoli-25071402 Kinnigoli-25071403

Comments

comments

Comments are closed.

Read previous post:
Kinnigoli 24071403
ಎಲ್ಲಾ ಮತ ಧರ್ಮಗಳ ಸಂಸ್ಕೃತಿ ತಿಳಿದುಕೊಳ್ಳಬೇಕು

ಕಿನ್ನಿಗೋಳಿ : ಸ್ನೇಹ ಸೌಹಾರ್ಧತೆ ಹಾಗೂ ಸಂಸ್ಕೃತಿ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಎಲ್ಲಾ ಮತ ಧರ್ಮಗಳ ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಮಾಜಿ ಅಧ್ಯಕ್ಷ ರಾಜೇಶ್...

Close