ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು

ಕಿನ್ನಿಗೋಳಿ : ಶಿಸ್ತು, ಸಂಸ್ಕಾರ, ವ್ಯಕ್ತಿತ್ವ ವಿಕಸನ, ನಾಯಕತ್ವ ಬೆಳೆಯಬೇಕಾದರೆ ಪಾಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಶುಕ್ರವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ವಿವಿಧ ಪಠ್ಯಪೂರಕ ಸಂಘ ಚಟುವಟಿಕೆಗಳ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇವಳ ಅನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಕಾಲೇಜಿನ ಹಳೇ ವಿದ್ಯಾರ್ಥಿ ಸುಮೀತ್ ಆಚಾರ್ಯ ಕಾಲೇಜಿಗೆ ೨ ಉಚಿತ ಲ್ಯಾಪ್ ಟಾಪ್ ಗಳನ್ನು ಕೊಡುಗೆಯಾಗಿ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಈಶ್ವರ್ ಕಟೀಲ್ ಉಪಸ್ಥಿತರಿದ್ದರು.
ಪ್ರಿನ್ಸಿಪಾಲ್ ಪ್ರೋ. ಜಯರಾಮ ಪೂಂಜ ಪ್ರಸ್ತಾವನೆಗೈದು ಸ್ವಾಗತಿಸಿದರು. ಉಪನ್ಯಾಸಕಿ ಶುಭಾ ರಾವ್ ವಂದಿಸಿದರು. ತಿಲಕ್ ರಾಜ್ ಹಾಗೂ ಅನುಷಾ ಕಾರ್ಯಕ್ರಮ ನಿರೂಪಿಸಿದರು.

Kinnigoli 25071401

Comments

comments

Comments are closed.

Read previous post:
Kinnigoli-25071403
ಲೇಖಕರಿಗೆ ಸಮಾನ ಅವಕಾಶ ನೀಡಬೇಕು

 ಕಿನ್ನಿಗೋಳಿ : ಯುಗಪುರುಷ ಪತ್ರಿಕೆಯು ನಿರಂತರವಾಗಿ ಕಿರಿಯ-ಹಿರಿಯ ಲೇಖಕರಿಗೆ ಸಮಾನ ಅವಕಾಶ ನೀಡಿದೆ. ತುಳುನಾಡಿನ ಪರಂಪರೆ ಸಾಂಸ್ಕೃತಿಕತೆಯನ್ನು ಉಳಿಸುವಲ್ಲಿ ಸಾಹಿತ್ಯದ ಕೊಡುಗೆ ಅಪಾರಗಿದ್ದು ಪತ್ರಿಕೆಗಳ ಔದಾರ್ಯತೆಯು ಜೀವನದಲ್ಲಿ ಮಾರ್ಗದರ್ಶಕವಾಗಿರಬೇಕು...

Close