ಸಮಾಜ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸಬೇಕು.

ಕಿನ್ನಿಗೋಳಿ : ಮಹಿಳೆಯರು ಶಿಕ್ಷಿತರಾಗಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿ ಸಮಾಜ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸಬೇಕು. ಎಂದು ಇನ್ನರ್ ವೀಲ್ ಸಂಸ್ಥೆಯ ಮಾಜಿ ಜಿಲ್ಲಾ ಚಯರ್‌ಮನ್ ಡಾ. ಮಾಲಿನಿ ಹೆಬ್ಬಾರ್ ಹೇಳಿದರು.
ಶನಿವಾರ ಕಿನ್ನಿಗೋಳಿ ಸಹಕಾರ ಸೌಧದಲ್ಲಿ ನಡೆದ ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್‌ನ 2014-15ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಹತ್ತನೇ ವರ್ಷಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನೂತನ ಅಧ್ಯಕ್ಷೆ ವೀಣಾ ಶೆಟ್ಟಿ ಹಾಗೂ ಕಾರ್ಯದರ್ಶಿ ರಾಧ ಶೆಣೈ ಅವರ ತಂಡ ಅಧಿಕಾರ ಸ್ವೀಕರಿಸಿದರು. ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ವಿಲಿಯಂ ಸಿಕ್ವೇರಾ ಉಪಸ್ಥಿತರಿದ್ದರು.

ಯುವ ಪ್ರತಿಭಾವಂತರಾದ ಸುಶ್ಮಿತಾಶೆಟ್ಟಿ ಹಾಗೂ ರೂಪ ಶ್ರೀ ಎನ್. ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಭ್ರಾಮರಿ ಮಹಿಳಾ ಸಮಾಜಕ್ಕೆ ಕಪಾಟು ಕೊಡುಗೆ, ಕುಮಾರಿ ಸುಪ್ರಿತಾ ಹಾಗೂ ಸ್ವಸ್ತಿಕ್ ಎಸ್. ಸಾಲ್ಯಾನ್ ಅವರ ಶಿಕ್ಷಣಕ್ಕೆ ಧನ ಸಹಾಯ ನೀಡಲಾಯಿತು. ಅಂಗನವಾಡಿಗೆ ಚಾಪೆ ಕೊಡುಗೆ, ಲಿಟ್ಲ್ ಫ್ಲವರ್ ಶಾಲೆಗೆ ವಾಟರ್ ಪ್ಯೂರಿಪೈರ್ ಹಾಗೂ ಪದ್ಮನೂರು ಶಾಲೆಗೆ ವೈದ್ಯಕೀಯ ಕಿಟ್ ವಿತರಿಸಲಾಯಿತು.
ಇನ್ನರ್‌ವೀಲ್ ನಿರ್ಗಮನ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ ಸ್ವಾಗತಿಸಿದರು, ಶಾರದಮ್ಮ ನಾಯರ್ ವಂದಿಸಿದರು. ಸುಧಾರಾಣಿ ಮತ್ತು ಶಾಲೆಟ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

Kinnigoli-28071401 Kinnigoli-28071402

 

Comments

comments

Comments are closed.

Read previous post:
Kinnigoli-28071404
ತೋಕೂರು ಆಟಿದ ತಿರ್ಲ್

ಕಿನ್ನಿಗೋಳಿ : ಆಟಿ ಆಚರಣೆಗಳು ತುಳುನಾಡಿನ ಜನಪದ ಸಂಸ್ಕ್ರತಿಯ ಭಾಗವಾಗಿದ್ದು ಆಟಿಯ ಆಚಾರ ವಿಚಾರಗಳನ್ನು ಯುವ ಜನಾಂಗಕ್ಕೆ ತಿಳಿ ಹೇಳುವ ಕಾರ್ಯ ಆಗಬೇಕು ಎಂದು ಕಿನ್ನಿಗೋಳಿ ರೋಟರಿ ಶಾಲಾ...

Close