ಪತ್ರಿಕೆ ಸಮಾಜದ ಕೈಗನ್ನಡಿ : ಹರಿಕೃಷ್ಣ ಪುನರೂರು

ಮೂಲ್ಕಿ: ಜನಸಾಮಾನ್ಯರ ಧ್ವನಿಯಾಗಿರುವ ಪತ್ರಿಕಾ ಮಾಧ್ಯಮದಿಂದ ಒಳಿತು ಕೆಡುಕು ಸಮಾನವಾಗಿದ್ದು ಸಮಾಜವು ಅದನ್ನು ಸ್ವೀಕರಿಸುವ ರೀತಿ ಪ್ರಾಮುಖ್ಯವಾಗಿದೆ. ಪತ್ರಿಕೆಯು ಸಮಾಜದ ಕೈಗನ್ನಡಿ ಆಗಿದ್ದು ನಿತ್ಯ ನಿರಂತರವಾಗಿ ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಧ್ಯಮ ಮಾಡಬೇಕು ಇದಕ್ಕೆ ಪತ್ರಕರ್ತರೆ ಹೊಣೆಯಾಗಿರುತ್ತಾರೆ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಮೂಲ್ಕಿಯ ಟೂರಿಸ್ಟ್ ಸಭಾಂಗಣದಲ್ಲಿ ಶನಿವಾರ ಮೂಲ್ಕಿ ವಲಯ ಪತ್ರಕರ್ತರ ಸಂಘದ ಸಂಯೋಜನೆಯಲ್ಲಿ ನಡೆದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಿನ್ನಿಗೋಳಿಯ ಅನಂತ ಪ್ರಕಾಶನದ ಸಂಪಾದಕ ಕೊಡೆತ್ತೂರು ಸಚ್ಚಿದಾನಂದ ಉಡುಪರನ್ನು ಸನ್ಮಾನಿಸಲಾಯಿತು.
ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಆಚಾರ್ಯ ಪಡುಬಿದ್ರಿ, ಸ್ಥಾಪಕ ಅಧ್ಯಕ್ಷ ಎಂ.ಸರ್ವೋತ್ತಮ ಅಂಚನ್ ಮೂಲ್ಕಿ, ಪ್ರಧಾನ ಕಾರ್ಯದರ್ಶಿ ಹಮೀದ್ ಪಡುಬಿದ್ರಿ, ಮಾಜಿ ಅಧ್ಯಕ್ಷ ಶರತ್ ಶೆಟ್ಟಿ ಹಾಜರಿದ್ದರು.

Mulki-28071401 Mulki-28071402

Comments

comments

Comments are closed.

Read previous post:
Kinnigoli 25071401
ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು

ಕಿನ್ನಿಗೋಳಿ : ಶಿಸ್ತು, ಸಂಸ್ಕಾರ, ವ್ಯಕ್ತಿತ್ವ ವಿಕಸನ, ನಾಯಕತ್ವ ಬೆಳೆಯಬೇಕಾದರೆ ಪಾಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ...

Close