ತೋಕೂರು ಆಟಿದ ತಿರ್ಲ್

ಕಿನ್ನಿಗೋಳಿ : ಆಟಿ ಆಚರಣೆಗಳು ತುಳುನಾಡಿನ ಜನಪದ ಸಂಸ್ಕ್ರತಿಯ ಭಾಗವಾಗಿದ್ದು ಆಟಿಯ ಆಚಾರ ವಿಚಾರಗಳನ್ನು ಯುವ ಜನಾಂಗಕ್ಕೆ ತಿಳಿ ಹೇಳುವ ಕಾರ್ಯ ಆಗಬೇಕು ಎಂದು ಕಿನ್ನಿಗೋಳಿ ರೋಟರಿ ಶಾಲಾ ಶಿಕ್ಷಕಿ ಸುನೀತಾ ಗುರುರಾಜ್ ಹೇಳಿದರು.
ತೋಕೂರು ಕಂಬಳಬೆಟ್ಟು ಶ್ರೀ ದೇವಿ ಮಹಿಳಾ ಮಂಡಲ ಆಶ್ರಯದಲ್ಲಿ ಸಂಘದ ಸಭಾಭವನದಲ್ಲಿ ಭಾನುವಾರ ನಡೆದ 12ನೇ ವರ್ಷದ ಆಟಿದ ತಿರ್ಲ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಆಶಾ ರತ್ನಾಕರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕೆಮ್ರಾಲ್ ಅತ್ತೂರು ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪೂರ್ಣಿಮಾ ರಾಧೇಶ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಉಪನ್ಯಾಸ ನೀಡಿದರು. ಶ್ರೀ ದೇವಿ ಮಹಿಳಾ ಮಂಡಲ ಅಧ್ಯಕ್ಷೆ ವಿಲಾಸಿನಿ ಮೆಂಡನ್ ಸ್ವಾಗತಿಸಿದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

Kinnigoli-28071404

Comments

comments

Comments are closed.

Read previous post:
Kinnigoli-28071403
ಯಕ್ಷಗಾನದಿಂದ ಪಾರಂಪರಿಕ ಕಥಾನಕಗಳು ಜೀವಂತ

ಕಿನ್ನಿಗೋಳಿ: ಸಾಂಸ್ಕೃತಿಕವಾಗಿ ಶ್ರೀಮಂತವಾಗಿ ಬೆಳೆದಿರುವ ಯಕ್ಷಗಾನದ ವಿವಿಧ ಪ್ರಕಾರಗಳಿಂದ ಪುರಾಣ ಪ್ರಸಿದ್ಧ ಕಥಾನಕಗಳು ಜೀವಂತವಾಗಿದೆ. ಮಾತಿನ ಮಂಟಪದಿಂದ ಕಲಾಚಾತುರ್ಯವನ್ನು ಓರೆಗೆ ಹಚ್ಚಲು ಸಾಧ್ಯವಿರುವ ಯಕ್ಷಗಾನ ತಾಳಮದ್ದಲೆಯಿಂದ ಕಲಾವಿದರು...

Close