ಯಕ್ಷಗಾನದಿಂದ ಪಾರಂಪರಿಕ ಕಥಾನಕಗಳು ಜೀವಂತ

ಕಿನ್ನಿಗೋಳಿ: ಸಾಂಸ್ಕೃತಿಕವಾಗಿ ಶ್ರೀಮಂತವಾಗಿ ಬೆಳೆದಿರುವ ಯಕ್ಷಗಾನದ ವಿವಿಧ ಪ್ರಕಾರಗಳಿಂದ ಪುರಾಣ ಪ್ರಸಿದ್ಧ ಕಥಾನಕಗಳು ಜೀವಂತವಾಗಿದೆ. ಮಾತಿನ ಮಂಟಪದಿಂದ ಕಲಾಚಾತುರ್ಯವನ್ನು ಓರೆಗೆ ಹಚ್ಚಲು ಸಾಧ್ಯವಿರುವ ಯಕ್ಷಗಾನ ತಾಳಮದ್ದಲೆಯಿಂದ ಕಲಾವಿದರು ತಮ್ಮ ಪ್ರತಿಭೆಯನ್ನು ಬೆಳಗಿಸಲು ಸಾಧ್ಯ, ಮಾನಸಿಕ ಆಹಾರವನ್ನು ನೀಡುವ ಸಾಂಸ್ಕೃತಿಕತೆಯನ್ನು ಪೋಷಿಸಿ ಬೆಳೆಸುವಲ್ಲಿ ಸಂಘ ಸಂಸ್ಥೆಗಳು ನಿರಂತರ ಪ್ರಯತ್ನ ನಡೆಸಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು.

ಕಿನ್ನಿಗೋಳಿಯ ಯುಗಪುರುಷ ಹಾಗೂ ಯಕ್ಷಲಹರಿ ಸಂಸ್ಥೆಯ ಜಂಟಿ ಸಂಯೋಜನೆಯಲ್ಲಿ ಪ್ರಾರಂಭವಾದ ಯಕ್ಷಗಾನ ತಾಳಮದ್ದಲೆ ಸಪ್ತಾಹವನ್ನು ಭಾನುವಾರ ಚಾಲನೆ ನೀಡಿ ಮಾತನಾಡಿದರು. ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್‌ಕುಮಾರ್ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿದ್ದರು.
ಮೂಲ್ಕಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮಂಗಳೂರಿನ ವಿಫೋರ್ ಮೀಡಿಯಾದ ಲೀಲಾಕ್ಷ ಕರ್ಕೇರ, ಕುಲಶೇಖರ ಸಿಂಡಿಕೇಟ್ ಬ್ಯಾಂಕ್‌ನ ಪ್ರಬಂಧಕ ಮಂಜುನಾಥ ಮಲ್ಯ, ಐಕಳ ಕರ್ನಾಟಕ ಬ್ಯಾಂಕ್‌ನ ಓಸ್ವಾಲ್ಡ್ ಡಿಸೋಜಾ, ಕಿನ್ನಿಗೋಳಿ ಕೆನರಾ ಬ್ಯಾಂಕ್‌ನ ಕೆ.ಎಸ್.ಸುಧಾಕರ, ವಿಜಯಾ ಬ್ಯಾಂಕ್‌ನ ಶಿವಪ್ರಸಾದ್, ಯುಕೋ ಬ್ಯಾಂಕ್‌ನ ಸಂತೋಷ್‌ಕುಮಾರ್, ಕಿನ್ನಿಗೋಳಿ ಯುಗಪುರುಷದ ಕೆ.ಭುವನಾಭಿರಾಮ ಉಡುಪ, ಯಕ್ಷಲಹರಿಯ ಅಧ್ಯಕ್ಷ ಶ್ರೀನಿವಾಸ ಭಟ್, ಶ್ರೀಧರ್ ಡಿ.ಎಸ್, ಲಕ್ಷ್ಮೀ ಶ ಶಾಸ್ತ್ರಿ, ಪಿ.ಸತೀಶ್ ರಾವ್ ಇನ್ನಿತರರು ಹಾಜರಿದ್ದರು.
ಆಗಸ್ಟ್ 2ರವರೆಗೆ ನಡೆಯಲಿರುವ ಯಕ್ಷಗಾನ ಸಪ್ತಾಹವು ವಾಚಮರ್ಥೋನುಧಾವತಿ ಎಂಬ ಹೆಸರಿನಲ್ಲಿ ನಡೆಯುತ್ತಿದೆ. ಭಾನುವಾರ ಜಿಲ್ಲೆಯ ಕಲಾವಿದರಿಂದ ಉಡುಪಿಯ ಅಂಬಾತನಯ ಮುದ್ರಾಡಿ ರಚಿಸಿರುವ ಮಹಾಸತಿ ಅನಸೂಯಾ ಎಂಬ ಕಥಾಭಾಗವನ್ನು ತಾಳಮದ್ದಲೆಯ ರೂಪದಲ್ಲಿ ಪ್ರದರ್ಶಿಸಿದರು.

Kinnigoli-28071403

Narendra Kerekadu

Comments

comments

Comments are closed.

Read previous post:
Mulki-28071401
ಪತ್ರಿಕೆ ಸಮಾಜದ ಕೈಗನ್ನಡಿ : ಹರಿಕೃಷ್ಣ ಪುನರೂರು

ಮೂಲ್ಕಿ: ಜನಸಾಮಾನ್ಯರ ಧ್ವನಿಯಾಗಿರುವ ಪತ್ರಿಕಾ ಮಾಧ್ಯಮದಿಂದ ಒಳಿತು ಕೆಡುಕು ಸಮಾನವಾಗಿದ್ದು ಸಮಾಜವು ಅದನ್ನು ಸ್ವೀಕರಿಸುವ ರೀತಿ ಪ್ರಾಮುಖ್ಯವಾಗಿದೆ. ಪತ್ರಿಕೆಯು ಸಮಾಜದ ಕೈಗನ್ನಡಿ ಆಗಿದ್ದು ನಿತ್ಯ ನಿರಂತರವಾಗಿ ಸಮಾಜದ...

Close