ಜಲ ಸಂರಕ್ಷಣಾ ದಿನ

ಕಿನ್ನಿಗೋಳಿ : ಮಳೆ ಕೊಯ್ಲು, ಮರಗಿಡಗಳ ಸಂರಕ್ಷಣೆ ಹಾಗೂ ಇಂಗು ಗುಂಡಿ ನಿರ್ಮಾಣ ಮಾಡಿದಾಗ ನೀರಿನ ಅಂತರ್ಜಲ ಮಟ್ಟ ಎರಿಕೆಯಾಗುತ್ತದೆ ಎಂದು ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ ಹೇಳಿದರು.
ಐಕಳ ಪೊಂಪೈ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕವು ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ ಜಲ ಸಂರಕ್ಷಣಾ ದಿನಾಚರಣೆ ಸಂದರ್ಭ ಮಾತನಾಡಿದರು.
ಐಕಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ವಸತಿ ಶಾಲೆಯ ಆವರಣದಲ್ಲಿ ಭೂಮಿಯ ಅಂತರ್ಜಲ ಮಟ್ಟ ಏರಲು ಇಂಗು ಗುಂಡಿಗಳನ್ನು ನಿರ್ಮಿಸಲಾಯಿತು. ಹಲವು ವಿಧದ ಸಸ್ಯಗಳನ್ನು ನೆಡಲಾಯಿತು.
ಈ ಸಂದರ್ಭ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ. ಎಸ್ ಗುಣಕರ್ ಡಾ. ಇ. ವಿಕ್ಟರ್ ವಾಜ್ ಹಾಗೂವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Kinnigoli-30071404

Comments

comments

Comments are closed.

Read previous post:
Kinnigoli-30071403
ಸ್ವಾವಲಂಬನೆಯ ಜೀವನ ಸಾಗಿಸಲು ಪ್ರಯತ್ನ ಮುಖ್ಯ

 ಕಿನ್ನಿಗೋಳಿ :ಮಹಿಳೆಯರು ಅಭಿವೃದ್ದಿ ಪಥದತ್ತ ಸಾಗಲು ಸಾಕಷ್ಟು ಅವಕಾಶಗಳಿವೆ ಸ್ವಾವಲಂಬನೆಯ ಜೀವನ ಸಾಗಿಸಲು ಪ್ರಯತ್ನ ಮುಖ್ಯ ಎಂದು ಕಿನ್ನಿಗೋಳಿ ಕೆನರಾ ಬ್ಯಾಂಕ್ ಪ್ರಬಂಧಕ ಕೆ. ಎನ್. ಸುಧಾಕರ್ ಎಂದು...

Close