ಸ್ವಾವಲಂಬನೆಯ ಜೀವನ ಸಾಗಿಸಲು ಪ್ರಯತ್ನ ಮುಖ್ಯ

 ಕಿನ್ನಿಗೋಳಿ :ಮಹಿಳೆಯರು ಅಭಿವೃದ್ದಿ ಪಥದತ್ತ ಸಾಗಲು ಸಾಕಷ್ಟು ಅವಕಾಶಗಳಿವೆ ಸ್ವಾವಲಂಬನೆಯ ಜೀವನ ಸಾಗಿಸಲು ಪ್ರಯತ್ನ ಮುಖ್ಯ ಎಂದು ಕಿನ್ನಿಗೋಳಿ ಕೆನರಾ ಬ್ಯಾಂಕ್ ಪ್ರಬಂಧಕ ಕೆ. ಎನ್. ಸುಧಾಕರ್ ಎಂದು ಹೇಳಿದರು.
ಸಂಜೀವಿನಿ ಸಮಗ್ರ ಸಮುದಾಯ ಆರೋಗ್ಯ ಕೇಂದ್ರ ಕನ್ಸೆಟ್ಟಾ ಆಸ್ಪತ್ರೆ ಕಿನ್ನಿಗೋಳಿ, ಸ್ಪಂದನ ಘಟಕ ಇದರ ಆಶ್ರಯದಲ್ಲಿ ಮಂಗಳವಾರ ಕಮ್ಮಜೆ ನೀತಿ ಸದನದಲ್ಲಿ ನಡೆದ ಮಹಿಳಾ ಸ್ಥಿತಿಗತಿ ಮತ್ತು ಲಿಂಗ-ಲಿಂಗತ್ವ ಪರಿಕಲ್ಪನೆ ಹಾಗೂ ಪೌಪ್ಟಿಕ ಆಹಾರ ತಯಾರಿ ಮತ್ತು ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು. ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಅಧ್ಯಕ್ಷತೆ ವಹಿಸಿದ್ದರು. ಸಂಜೀವಿನಿ ಸಂಸ್ಥೆಯ ಲಲಿತಾ ಭಾಸ್ಕರ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಉಪ ಪ್ರಬಂದಕ ರಾಮಚಂದ್ರ ಮಲ್ಯ, ಸಂಜೀವಿನಿ ಸಂಸ್ಥೆಯ ದಿನೇಶ್, ಸ್ಪಂದನ ಘಟಕದ ಅಧ್ಯಕ್ಷೆ ಕವಿತಾ ಉಪಸ್ಥಿತರಿದ್ದರು.
ಅನುಷಾ ಸ್ವಾಗತಿಸಿ ಪ್ರಭಾ ವಂದಿಸಿದರು ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು

Kinnigoli-30071403

Comments

comments

Comments are closed.

Read previous post:
Kinnigoli-30071402
ಸಹಾಯ ಧನ ವಿತರಣೆ

ಕಿನ್ನಿಗೋಳಿ : ಪುನರೂರು ವಿಪ್ರ ಸಂಪದ ವತಿಯಿಂದ ಪುನರೂರು ನಿವಾಸಿ ರಾಜಶೇಖರ ರಾವ್ ಅವರ ಹೃದಯ ಶಸ್ತ್ರ ಚಿಕಿತ್ಸೆಗೆ 75ಸಾವಿರ ರೂಗಳ ಸಹಾಯ ಧನ ನೀಡಲಾಯಿತು. ಈ ಸಂದರ್ಭ ಪುನರೂರು...

Close