ನಾರಾಯಣ ಪಂಬದ

ಕಿನ್ನಿಗೋಳಿ: ಕೆಂಚನಕೆರೆ ಅಂಗರಗುಡ್ಡೆ ನಿವಾಸಿ ಭೂತ ನರ್ತಕ ನಾರಾಯಣ ಪಂಬದ (62 ವರ್ಷ) ಬುಧವಾರ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರಿಗೆ ಪತ್ನಿ ಮತ್ತು ಎಂಟು ಪುತ್ರರು ಇದ್ದಾರೆ.
ಮೃತರು ಕಳೆದ 40 ವರ್ಷಗಳಿಂದ ಕರಾವಳಿಯ ಮುಖ್ಯ ರಾಜನ್ ದೈವಗಳಿಗೆ ಭೂತ ನರ್ತಕ ಸೇವೆ ಸಲ್ಲಿಸಿದ್ದರು. ಕಾಪು ಸಾವಿರ ಸೀಮೆಯ ಧೂಮಾವತಿ ದೈವ, ಮೂಲ್ಕಿ ನಡಿಕುದ್ರು ಶ್ರೀ ಜಾರಾಂದಯ ದೈವ , ಕಾಪು ಪಡು ಬೊಬ್ಬರ್ಯ ದೈವ, ನಿಟ್ಟೆ ಕೆಮ್ಮಣ್ಣು ಧೂಮಾವತಿ ದೈವಗಳಿಗೆ ಮುಖ್ಯ ಭೂತ ಕೋಲ ನರ್ತಕರಾಗಿದ್ದರು. ಇದಲ್ಲದೆ ಉಭಯ ಜಿಲ್ಲೆ ಹಲವಾರು ದೈವಗಳಿಗೆ ಭೂತ ನರ್ತಕರಾಗಿ ಕೆಲಸ ಮಾಡಿದ್ದಾರೆ. ಜಾನಪದ ಕಲಾವಿದರಾದ ನಾರಾಯಣ ಪಂಬದರಿಗೆ ಹಲವಾರು ರಾಜನ್ ದೈವಗಳ ಪಾಡ್ದನಗಳು , ಸಂಧಿಗಳು ಕಂಠಪಾಠವಿತ್ತು. ಇವರ ಐವರು ಪುತ್ರರು ಭೂತ ನರ್ತಕದ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ.
ಮೃತರಿಗೆ ಮೂಲ್ಕಿ ನಡಿಕುದ್ರು, ಕಾಪು ಸಾವಿರ ಸೀಮೆ ಮುಂತಾದ ಕಡೆಗಳಲ್ಲಿ ಗೌರವ ಸನ್ಮಾನಗಳು ಸಂದಿವೆ. ಮಾಜಿ ಶಾಸಕ ಕಾಪು ಲಾಲಾಜಿ ಮೆಂಡನ್, ಕಾಪು ಹರಿಶ್ಚಂದ್ರಪೂಜಾರಿ, ಉಡುಪಿ ಜಿ. ಪಂ. ಉಪಾಧ್ಯಕ್ಷ ವಾಮನ ಕೋಟ್ಯಾನ್, ಕಿಲ್ಪಾಡಿ ಗ್ರಾ. ಪಂ. ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಸಂತಾಪ ಸೂಚಿಸಿದ್ದಾರೆ.

Kinnigoli 31071404

Comments

comments

Comments are closed.

Read previous post:
Kinnigoli 31071403
ಎನ್.ಸಿ.ಸಿ ತರಬೇತಿ ಹಾಗೂ ಸೇನೆಯ ಬಗ್ಗೆ ಮಾಹಿತಿ

ಮೂಲ್ಕಿ: ಭಾರತೀಯ ಸೇನೆಯ ವಿವಿಧ ಕ್ಷೇತ್ರದಲ್ಲಿ ಯುವ ಪೀಳಿಗೆಗೆ ವಿಫುಲ ಅವಕಾಶಗಳಿದ್ದು ಎನ್.ಸಿ.ಸಿಯಲ್ಲಿ ಸಿ ಸರ್ಟಿಫಿಕೇಟ್ ಪಡೆಯುವ ಮೂಲಕ ಸೇನೆಯಲ್ಲಿ ನೇರ ಪ್ರವೇಶಗಳಿಸಬಹುದು ಎಂದು ಮಂಗಳೂರು ಎನ್‌ಸಿಸಿ ಕಮಾಂಡಿಂಗ್...

Close