ಗಿಡಮೂಲಿಕೆಗಳ ದಿನಾಚರಣೆ

ಕಿನ್ನಿಗೋಳಿ: ವೈಜ್ಷಾನಿಕ ಯುಗದಲ್ಲಿ ಯೋಗವು ವಿದೇಶಗಳಲ್ಲಿ ಅಪಾರ ಪ್ರಸಿದ್ಧಿ ಪಡೆಯುತ್ತಿದ್ದು ಸ್ವಸ್ಥ ಆರೋಗ್ಯ ಕಾಪಾಡಲು ಯೋಗ ಅತೀ ಸರಳ ವಿಧಾನವಾಗಿದೆ. ಎಂದು ಮಂಗಳೂರಿನ ವೈದ್ಯ ಯೋಗ ಗುರು ಡಾ| ಜ್ಞಾನೇಶ್ವರ್ ನಾಯಕ್ ಹೇಳಿದರು.
ಮಂಗಳವಾರ ಕೆಂಚನಕೆರೆಯಲ್ಲಿ ಪತಂಜಲಿ ಯೋಗಪೀಠ ಮಂಗಳೂರು ಹಾಗೂ ಕೆಂಚನಕೆರೆ ಯೋಗೋಪಾಸನ ಕೇಂದ್ರದಲ್ಲಿ ಗಿಡಮೂಲಿಕೆಗಳ ದಿನಾಚರಣೆ ಹಾಗೂ ಕೆಂಚನಕೆರೆ ಯೋಗ ಮಂದಿರದ ಚಪ್ಪರದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗ ಗುರು ರಾಘವೇಂದ್ರ ರಾವ್, ನಾರಾಯಣ ಶೆಟ್ಟಿ , ಗೋವಿಂದರಾಯ ಪ್ರಭು, ವೈ. ಎನ್. ಸಾಲ್ಯಾನ್, ಗೀತಾ ಜಯ ಶೆಟ್ಟಿ ಮತ್ತಿತರರಿದ್ದರು. ಜಯಕುಮಾರ್ ಸ್ವಾಗತಿಸಿದರು. ಕೇಂದ್ರದ ಮುಖ್ಯ ಗುರು ಜಯ ಎಮ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೆಂಚನಕೆರೆ ಯೋಗ ಮಂದಿರದಲ್ಲಿ ಪ್ರತಿದಿನ ಬೆಳಿಗ್ಗೆ ಉಚಿತ ಯೋಗ ತರಗತಿಗಳು ನಡೆಯುತ್ತಿವೆ.

Kinnigoli 31071406

Comments

comments

Comments are closed.