ಯುವಕ ಯುವತಿಯರ ಸಮಾಲೋಚನಾ ಸಭೆ

ಮೂಲ್ಕಿ: ಯುವ ಪೀಳಿಗೆಯಲ್ಲಿ ಆಧುನೀಕತೆ ಮತ್ತು ಶ್ರೀಮಂತಿಗೆಯ ಲಾಲಸೆಯನ್ನು ಬಿತ್ತಿ ದುಶ್ಚಟಗಳು ಅನ್ಯಾಯ ಅನಾಚಾರಗಳನ್ನು ಹೆಚ್ಚುವಂತೆ ಮಾಡಿ ಸಮಾಜಿಕ ಶಾಂತಿಗೆ ಭಂಗ ತರುವ ಈ ದಿನಗಳಲ್ಲಿ ಯುವಕ ಯುವತಿಯರು ಎಚ್ಚರವಾಗಿದ್ದು ಸಮಾಜ ಕಂಟಕರ ಬಗ್ಗೆ ಜಾಗ್ರತೆ ವಹಿಸುವುದು ಬಹಳ ಮುಖ್ಯವಾಗಿದ್ದು ಸ್ವಾಮೀ ವಿವೇಕಾನಂದರ ತತ್ವ ಮತ್ತು ಆದರ್ಶಗಳು ಯುವ ಪೀಳಿಗೆಯ ಅಭಿವೃದ್ಧಿಗೆ ಸರ್ವಕಾಲಿಕ ಸ್ಪೂರ್ತಿ ಮತ್ತು ದಾರಿ ದೀಪವಾಗಿದೆ ಎಂದು ಡಿವೈನ್ ಪಾರ್ಕ್ ಯುವ ಸಂಘಟನೆಯ ಅಧ್ಯಕ್ಷ ರಾಜೇಶ್ ಎಚ್.ಪಿ. ಹೇಳಿದರು. ಸ್ವಾಮೀ ವಿವೇಕಾನಂದರ ವಿಶಿಷ್ಟ ಲೀಲೋದ್ಯಾನ ಡಿವೈನ್ ಪಾರ್ಕ್ ಸಾಲಿಗ್ರಾಮದ ಯುವ ಶಕ್ತಿ ಸಂಘಟನೆಯ ವತಿಯಿಂದ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮಂಗಳವಾರ ನಡೆದ ಯುವಕ ಯುವತಿಯರ ಸಮಾಲೋಚನಾ ಸಭೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ಡಿವೈನ್ ಪಾರ್ಕ್ ಅಧಿಕಾರಿ ಮಹೇಶ್ ವಕ್ವಾಡಿ ಯವರು ಯುವ ಸಂಘಟನೆ ರಚನೆ ಮತ್ತು ಅದರ ಪಾತ್ರದ ಬಗ್ಗೆ ತರಬೇತಿ ನೀಡಿದರು. ಸಂಘಟನೆಯ ಕಾರ್ಯಕರ್ತರಾದ ಬಾಲಕೃಷ್ಣ ನಾಯಕ್ ಮತ್ತು ರಚನಾ ಅತಿಥಿಯಾಗಿದ್ದರು. ಪ್ರದೀಪ್ ಸ್ವಾಗತಿಸಿದರು,ರಾಘವ ನಿರೂಪಿಸಿದರು. ಪಲ್ಲವಿ ವಂದಿಸಿದರು.

Kinnigoli 31071405

Comments

comments

Comments are closed.

Read previous post:
Kinnigoli 31071404
ನಾರಾಯಣ ಪಂಬದ

ಕಿನ್ನಿಗೋಳಿ: ಕೆಂಚನಕೆರೆ ಅಂಗರಗುಡ್ಡೆ ನಿವಾಸಿ ಭೂತ ನರ್ತಕ ನಾರಾಯಣ ಪಂಬದ (62 ವರ್ಷ) ಬುಧವಾರ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರಿಗೆ ಪತ್ನಿ ಮತ್ತು ಎಂಟು...

Close