ಇಂಟರ‍್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಮೂಲ್ಕಿ: ವಿದ್ಯಾರ್ಥಿಗಳು ಪರಸ್ಪರ ಸಹಕಾರಿಯಾಗಿ ಸ್ವಾವಲಂಭನೆ ಹಾಗೂ ಪ್ರಾಪಂಚಿಕ ವಿದ್ಯಮಾನಗಳನ್ನು ಅರಿತು ಬೆಳೆಯಲು ಇಂಟರ‍್ಯಾಕ್ಟ್ ಕ್ಲಬ್‌ಗಳು ಸಹಕಾರಿಯಾಗಿವೆ ಎಂದು ರೋಟರಿ ಸಹಾಯಕ ಗವರ್ನರ್ ಎಂ.ಜಿ.ನಾಗೇಂದ್ರ ಹೇಳಿದರು. ಮೂಲ್ಕಿ ರೋಟರಿಯ ಆಶ್ರಯದಲ್ಲಿ ಪರಿಸರದ 12 ಶಾಲೆಗಳ ಇಂಟರ‍್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶೈಕ್ಷಣಿಕ ವಿಷಯಗಳಿಗೆ ಆದ್ಯತೆ ನೀಡುವಂತೆ ಕ್ರೀಡೆ ಮತ್ತು ಸಮದಾಯ ಸೇವೆ ಹಾಗೂ ಅಂತರಾಷ್ಟ್ರೀ ವಿದ್ಯಮಾನಗಳ ಬಗ್ಗೆ ಸೂಕ್ತ ಮಾಹಿತಿ ನಾಯಕತ್ವ ಗುಣಗಳ ಉನ್ನತಿಗಾಗಿ ಸೂಕ್ತ ತರಬೇತಿಗಳನ್ನು ಪಡೆದುಕೊಂಡು ಬೆಳೆಯಲು ರೋಟರಿ ಕ್ಲಬ್ ಸಹಕಾರ ನೀಡುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ರೋಟರಿ ಅಧ್ಯಕ್ಷ ಜೋಯಲ್‌ಹೆರಾಲ್ಡ್ ಡಿಸೋಜಾ ವಹಿಸಿ12 ಇಂಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ಪ್ರತಿಜ್ಞಾವಿಧಿ ಭೋಧಿಸಿದರು. ಅತಿಥಿಯಾಗಿ ಜೋನಲ್ ಕೋಆರ್ಡಿನೇಟರ್ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಇಂಟರ‍್ಯಾಕ್ಟ್ ಚೇರ‍್ಮೇನ್ ವಿಷ್ಣುಮೂರ್ತಿ,ಕಾರ್ಯದರ್ಶಿ ವಿಲ್‌ಹೆಲ್ಮ್ ಮಾಬೆನ್ ಉಪಸ್ಥಿತರಿದ್ದರು ಈ ಸಂದರ್ಭ ಕಾರ್ಗಿಲ್ ಹುತಾತ್ಮರ ಬಗ್ಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ವಿಷ್ಣುಮೂತಿ ಪ್ರಸ್ತಾವಿಸಿದರು ಪಡುಪಣಂಬೂರು ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ವಂದಿಸಿದರು.

Kinnigoli 31071402

Bhagyavan Sanil

Comments

comments

Comments are closed.

Read previous post:
Kinnigoli 31071401
ವಿದ್ಯಾರ್ಥಿಗಳ ಭವಿಷ್ಯ ಜೀವನದ ಸಾಧನೆಗೆ ಸಹಕಾರಿ

ಮೂಲ್ಕಿ: ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯರಾಗಿ ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಗುಣಗಳ ಗಳಿಕೆ ವಿದ್ಯಾರ್ಥಿಗಳ ಭವಿಷ್ಯ ಜೀವನದ ಗುರಿ ಸಾಧನೆಗೆ...

Close