ಎನ್.ಸಿ.ಸಿ ತರಬೇತಿ ಹಾಗೂ ಸೇನೆಯ ಬಗ್ಗೆ ಮಾಹಿತಿ

ಮೂಲ್ಕಿ: ಭಾರತೀಯ ಸೇನೆಯ ವಿವಿಧ ಕ್ಷೇತ್ರದಲ್ಲಿ ಯುವ ಪೀಳಿಗೆಗೆ ವಿಫುಲ ಅವಕಾಶಗಳಿದ್ದು ಎನ್.ಸಿ.ಸಿಯಲ್ಲಿ ಸಿ ಸರ್ಟಿಫಿಕೇಟ್ ಪಡೆಯುವ ಮೂಲಕ ಸೇನೆಯಲ್ಲಿ ನೇರ ಪ್ರವೇಶಗಳಿಸಬಹುದು ಎಂದು ಮಂಗಳೂರು ಎನ್‌ಸಿಸಿ ಕಮಾಂಡಿಂಗ್ ಆಫಿಸರ್ ಕ್ಯಾಪ್ಟನ್ ಎಂ.ಸಿ.ಬೆಳ್ಳಿಯಪ್ಪ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನ ಎನ್.ಸಿ.ಸಿ ಕ್ಯಾಡೆಟ್‌ಗಳಿಗೆ ರ‍್ಯಾಂಕ್ ಪ್ರಧಾನ ಕಾರ್ಯಕ್ರಮ ಹಾಗೂ ಕಾರ್ಗಿಲ್ ದಿನಾಚರಣೆ ಸಂದರ್ಭ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಾಲಾ ಕಾಲೇಜುಗಳಲ್ಲಿ ನಡೆಸಲಾಗುವ ಎನ್.ಸಿ.ಸಿ ಶಿಭಿರಾರ್ಥಿಯಾಗಿ ಪಾಲ್ಗೊಂಡು ವಿವಿಧ ತರಬೇತಿ ಹಾಗೂ ಪರೀಕ್ಷೆಗಳಲ್ಲಿ ಭಾಗವಹಿಸುವುರಿಂದ ಸೇನೆಯ ಬಗ್ಗೆ ಮಾಹಿತಿ ದೊರೆಯುವುದು ಹಾಗೂ ಸೇನೆಯ ಶಿಸ್ತಿನ ಜೀವನ ನಿಮ್ಮದಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ ವಹಿಸಿದ್ದರು.ಅತಿಥಿಗಳಾಗಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್, ಕಾರ್ಯಕ್ರಮ ಸಂಯೋಜಕ ನೌಕಾಪಡೆಯ ಲೆಪ್ಟಿನೆಂಟ್ ಹೆಚ್.ಜಿ.ನಾಗರಾಜ ನಾಯಕ್,ಆರ್ಮಿ ವಿಭಾಗದ ನಿತಿನ್ ಎಸ್.ಎನ್, ಕೆಡೆಟ್ ಕ್ಯಾಪ್ಟನ್ ಜೇಸನ್ ಲೋಬೊ,ಅಂಡರ್ ಆಫಿಸರ್ ಪವನ್ ರಾಜ್ ಉಪಸ್ಥಿತರಿದ್ದರು. ಹೆಚ್.ಜಿ.ನಾಗರಾಜ ನಾಯಕ್ ಸ್ವಾಗತಿಸಿದರು. ದೀಕ್ಷಾ ಪುತ್ರನ್ ನಿರೂಪಿಸಿದರು,ನಿತಿನ್ ವಂದಿಸಿದರು.

Kinnigoli 31071403

Bhagyavan Sanil

Comments

comments

Comments are closed.

Read previous post:
Kinnigoli 31071402
ಇಂಟರ‍್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಮೂಲ್ಕಿ: ವಿದ್ಯಾರ್ಥಿಗಳು ಪರಸ್ಪರ ಸಹಕಾರಿಯಾಗಿ ಸ್ವಾವಲಂಭನೆ ಹಾಗೂ ಪ್ರಾಪಂಚಿಕ ವಿದ್ಯಮಾನಗಳನ್ನು ಅರಿತು ಬೆಳೆಯಲು ಇಂಟರ‍್ಯಾಕ್ಟ್ ಕ್ಲಬ್‌ಗಳು ಸಹಕಾರಿಯಾಗಿವೆ ಎಂದು ರೋಟರಿ ಸಹಾಯಕ ಗವರ್ನರ್ ಎಂ.ಜಿ.ನಾಗೇಂದ್ರ ಹೇಳಿದರು. ಮೂಲ್ಕಿ...

Close