ವಿದ್ಯಾರ್ಥಿಗಳ ಭವಿಷ್ಯ ಜೀವನದ ಸಾಧನೆಗೆ ಸಹಕಾರಿ

ಮೂಲ್ಕಿ: ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯರಾಗಿ ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಗುಣಗಳ ಗಳಿಕೆ ವಿದ್ಯಾರ್ಥಿಗಳ ಭವಿಷ್ಯ ಜೀವನದ ಗುರಿ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ರಾ. ಸೇ. ಯೋಜನೆಯ ಸಂಯೋಜನಾಧಿಕಾರಿಗಳಾದ ಪ್ರೊ| ವಿನೀತಾ ಕೆ ಹೇಳಿದರು. ವಿಜಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2014-15ನೇ ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಮಾಜದ ಸೇವೆಯಲ್ಲೂ ತೊಡಗಿಸಿಕೊಳ್ಳುವ ಉದಾತ್ತ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವ ಹೊಂದಬಹುದೆಂದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಆರ್. ಶಂಕರ್ ಅಧ್ಯಕ್ಷತೆ ವಹಿಸಿದ್ದರು, ರಾ.ಸೇ ಯೋಜನಾಧಿಕಾರಿ ಪ್ರೊ| ಬಿ. ಈ. ಸಂಪತ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ| ಎಂ. ಎ. ಆರ್. ಕುಡ್ವ, ಪಿಯು ಪ್ರಾಂಶುಪಾಲೆ ಪಮೀದಾ ಬೇಗಂ, ವಿಧ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ| ನಾರಾಯಣ್, ವಿಧ್ಯಾರ್ಥಿ ನಾಯಕ ಮಂಜುನಾಥ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ವಿಜೇತಾ ಕಾಮತ್ ಸ್ವಾಗತಿಸಿದರು. ಕಾರ್ಯದರ್ಶಿ ರಾಕೇಶ್ ವಂದಿಸಿದರು. ನಯನಾಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Kinnigoli 31071401

Comments

comments

Comments are closed.

Read previous post:
Kinnigoli-30071405
ಜ್ಯೋತಿ ಜಿ ಶೆಟ್ಟಿ

ಕಿನ್ನಿಗೋಳಿ :  ಪುನರೂರು ನಾಗವೀಣಾ ದಿ. ಗೋಪಾಲ ಶೆಟ್ಟಿ ಅವರ ಪತ್ನಿ ಪುತ್ತಿಗೆ ಗುತ್ತು ಬರಕಲ ನಿವೃತ್ತ ಮುಖ್ಯ ಶಿಕ್ಷಕಿ ಬಾಪೂಜಿ ಶಾಲಾ ಸಂಚಾಲಕಿ ಜ್ಯೋತಿ ಜಿ...

Close