ಮೂಡುಬಿದರೆ: ಅಡಕೆ, ಸೊತ್ತು ಕಳವು :

ಮೂಡುಬಿದರೆ: ದರಗುಡ್ಡೆ ಗ್ರಾಮದ ಪಲ್ಕೆದ ಬೈಲು ವಿನ್ಸೆಂಟ್ ಡಿಮೆಲ್ಲೋ ಎಂಬವರಿಗೆ ಸೇರಿದ 90ಸಾವಿರ ರೂಪಾಯಿ ಮೌಲ್ಯದ 281 ಕೆ.ಜಿ ತೂಕದ ಸುಲಿದ ಅಡಿಕೆ ಹಾಗೂ 17 ಸಾವಿರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳು ಕಳವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವು ಗೈದ ಪೈಂಟಿಂಗ್ ವೃತ್ತಿಯ  ದಿನೇಶ್ ಪೂಜಾರಿ (28) ಹಾಗೂ ಹರೀಶ್ ಪೂಜಾರಿ (26) ಆರೋಪಿಗಳನ್ನು ಬಂದಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದು ಆತನ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ. ವಿನ್ಸೆಂಟ್ ಅವರು ಬುಧವಾರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸರ್ಕಲ್ ಇನ್ಸ್‌ಪೆಕ್ಟರ್ ಅನಂತಪದ್ಮನಾಭ ಮಾಹಿತಿ ಕಲೆ ಹಾಕುತ್ತಿದ್ದಾಗ ಮಂಗಳವಾರ ರಾತ್ರಿ ತಲೆ ಮರೆಸಿಕೊಂಡಿದ್ದ ಆರೋಪಿ ಈ ಪರಿಸರದಲ್ಲಿ ಬೈಕ್‌ನಲ್ಲಿ ಹಲವು ಬಾರಿ ಓಡಾಡಿರುವುದು ತಿಳಿದು ಬಂತು. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದರು.

 

Moodabidre-01081401

Comments

comments

Comments are closed.

Read previous post:
ಕಾರ್ ಸ್ಕಿಡ್ ಆಗಿ ಗೋಡೆಗೆ ಡಿಕ್ಕಿ

ಮೂಲ್ಕಿ: ಚಾಲಕನ ನಿಯಂತ್ರಣ ಕಳೆದುಕೊಂಡ ಸ್ವಿಪ್ಟ್ ಕಾರ್ ಸ್ಕಿಡ್ ಆಗಿ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ಕೊಲ್ನಾಡು ಜಂಕ್ಷನ್ ಸಮೀಪ ಶುಕ್ರವಾರ...

Close