ದೈವಸ್ಥಾನದಲ್ಲಿ ಕಳವು

ಬಜಪೆ: ಬಜ್ಪೆ ಠಾಣಾ ವ್ಯಾಪ್ತಿಯ ಪೆರ್ಮುದೆ, ಕುಡುಬಿ ಪದವಿನಲ್ಲಿರುವ ಕನ್ನಿಕಾ ನಿಲಯದ ದೈವಸ್ಥಾನಕ್ಕೆ ಗುರುವಾರ ರಾತ್ರಿ ಕಳ್ಳರು ನುಗ್ಗಿದ್ದು ಕೋಟ್ಯಾಂತರ ರೂಪಾಯಿ ಮೌಲ್ಯದ ದೈವದ ಮುಖವಾಡ ಒಡವೆಗಳು ಕದ್ದೊಯ್ದಿದಾರೆ ಪೆರ್ಮುದೆಯ ದಿವ್ಯರೂಪ ಕನ್ಸಟ್ರಕ್ಷನ್ಸ್’ ಮಾಲಕ ಯಾದವ ಕೋಟ್ಯಾನ್ ಅವರ ಮನೆಯ ಮುಂಬಾಗದಲ್ಲಿರುವ ಅಣ್ಣಪ್ಪ ಪಂಜುರ್ಲಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿನ ಚಿನ್ನ, ವಜ್ರ ಲೇಪಿತ ದೈವದ ಮುಖವಾಡ, ದೈವದ ಚಿನ್ನದ ನಾಲಗೆ ಹಾಗೂ ಇತರ ಸೊತ್ತುಗಳನ್ನು ಗುರುವಾರ ತಡ ರಾತ್ರಿಯಲ್ಲಿ ಕಳ್ಳರು ಒಳನುಗ್ಗಿ ಕಳ್ಳತನಗೈದಿದ್ದಾರೆ. ಘಟನೆ ಶುಕ್ರವಾರ ಮುಂಜಾನೆ ಬೆಳಕಿಗೆ ಬಂದಿದ್ದು ಬಜ್ಪೆ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ. ಕಳವಾದ ಸೊತ್ತಿನ ಮೌಲ್ಯ 1.50ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಕಳ್ಳತನದ ದೃಶ್ಯ ಮನೆಯ ಹೊರಭಾಗದಲ್ಲಿ ಅಳವಡಿಸಲಾಗಿದ್ದ ಸಿ.ಸಿ.ಕೆಮರಾದಲ್ಲಿ ದಾಖಲಾಗಿದ್ದು ಸ್ಥಳಕ್ಕೆ ಬೆರಳಚ್ಚು, ಶ್ವಾನ ದಳ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ ಅಂತರಾಜ್ಯ ಕಳ್ಳರ ತಂಡದ ಕೃತ್ಯ: ಇದಾಗಿರುವ ಸಾದ್ಯತೆ ಇದೆ, ಬಜಪೆಯಲ್ಲಿ ಹಲವು ಕಳ್ಲ ತನ ಪ್ರಕರಣಗಳು ನಡೆದಿದ್ದು ಈ ಹಿಂದೆಯೂ ಬಜ್ಪೆ, ಪೆರ್ಮುದೆ ಹಾಗೂ ಸುತ್ತಮುತ್ತ ಮನೆ, ಅಂಗಡಿ ಕಳವು ಪ್ರಕರಣಗಳು ನಡೆದಿದೆ.

Permude-01081401 Permude-01081402 Permude-01081403

 

Comments

comments

Comments are closed.

Read previous post:
Moodabidre-01081401
ಮೂಡುಬಿದರೆ: ಅಡಕೆ, ಸೊತ್ತು ಕಳವು :

ಮೂಡುಬಿದರೆ: ದರಗುಡ್ಡೆ ಗ್ರಾಮದ ಪಲ್ಕೆದ ಬೈಲು ವಿನ್ಸೆಂಟ್ ಡಿಮೆಲ್ಲೋ ಎಂಬವರಿಗೆ ಸೇರಿದ 90ಸಾವಿರ ರೂಪಾಯಿ ಮೌಲ್ಯದ 281 ಕೆ.ಜಿ ತೂಕದ ಸುಲಿದ ಅಡಿಕೆ ಹಾಗೂ 17 ಸಾವಿರ ರೂಪಾಯಿ ಮೌಲ್ಯದ...

Close