ಪಂಜ ಹೊಸ ರಸ್ತೆ ಮುಳುಗಡೆ

ಕಿನ್ನಿಗೋಳಿ : ಕಳೆದ ಎರಡು ದಿನಗಳಿಂದ ನಿರಂತರ ಮಳೆ ಬಂದು ನೆರೆ ಭೀತಿ ಉಂಟು ಮಾಡಿದ ಕಿನ್ನಿಗೋಳಿ ಬಳಿಯ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಂಜ , ಉಲ್ಯ ಪ್ರದೇಶದಲ್ಲಿ ನಂದಿನಿ ನದಿ ಉಕ್ಕಿ ಹರಿದು ಪಂಜ ಬೈಲಗುತ್ತು ಪ್ರದೇಶದ ಸುತ್ತಮುತ್ತ ಇರುವ 7 ಮನೆ ಹಾಗೂ ಅದರ ಮತ್ತೋಂದು ಕಡೆಯಲ್ಲಿರುವ ಉಲ್ಯ ಪ್ರದೇಶದ 14 ಮನೆಗಳು ಜಲಾವೃತಗೊಂಡು ಸಂಚಾರಕ್ಕೆ ದೋಣಿಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಪಂಜ ಬೈಲಗುತ್ತು ಪ್ರದೇಶದಲ್ಲಿ ನೆರೆ ನೀರು ಬಂದು ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಕಿನ್ನಿಗೋಳಿ ಪಕ್ಷಿಕೆರೆ ಪಂಜದಿಂದ ಖಡ್ಗೇಶ್ವರಿ ದೇವಳವನ್ನು ಸಂಪರ್ಕಿಸುವ ನಿರ್ಮಾಣ ಹಂತದಲ್ಲಿರುವ ಹೊಸ ರಸ್ತೆ ನೀರಿನಲ್ಲಿ ಮುಳುಗಡೆಯಾಗಿದೆ.

Kinnigoli 2081404  Kinnigoli 2081403

Kinnigoli-2081405

 

Comments

comments

Comments are closed.

Read previous post:
Kinnigoli 2081402
ಕಿಲೆಂಜೂರು 6 ಮನೆಗಳ ಸಂಪರ್ಕ ಕಡಿತ

ಕಿನ್ನಿಗೋಳಿ : ಎರಡು ದಿನಗಳಿಂದ ಸುರಿದ ದಾರಾಕಾರ ಮಳೆಯಿಂದಾಗಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲೆಂಜೂರಿನಲ್ಲಿ ಕೃಷಿ ಭೂಮಿ ಮುಳುಗಡೆಯಾಗಿದ್ದು, ಅತ್ತೂರು ಬೈಲು, ಮಹಾಗಣಪತಿ ಮಂದಿರಕ್ಕೆ ಸಂಪರ್ಕಿಸುವ ರಸ್ತೆ...

Close