ಎಕ್ಕಾರು ವಿದ್ಯುತ್ ಅವಘಡ

ಬಜಪೆ : ಬಜಪೆ ಠಾಣಾ ವ್ಯಾಪಿಯ ಎಕ್ಕಾರು ಸಮೀಪ ಮೆಸ್ಕಾಂ ಲೈನ್ ಮೆನ್ ವಿದ್ಯುತ್ ಅವಘಡದಲ್ಲಿ ದಾರುಣ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ನಡೆದಿದೆ. ಮೃತ ಎಕ್ಕಾರು ನಿವಾಸಿ ವೀರೇಶ್ (20) ಎಕ್ಕಾರುವಿನಲ್ಲಿ ವಿದ್ಯುತ್ ಲೈನ್ ಸಮಸ್ಯೆಯನ್ನು ಸರಿಪಡಿಸಲು ಮೆಸ್ಕಾಂ ಲೈನ್ ದುರ್ಗಾಪ್ರಸಾದ್ ಅವರೊಂದಿಗೆ ಹೋಗಿದ್ದರು. ವಿದ್ಯುತ್ ತಂತಿಯ ಕನೆಕ್ಷನ್ ತೆಗೆಯಲಾಗಿದೆ ಎಂದು ವೀರೇಶ್ ವಿದ್ಯುತ್ ಕಂಬವನ್ನು ಹತ್ತಿದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ಕೆಳಗಡೆ ಎಸೆಯಲ್ಪಟ್ಟು ಕೆಳಗಡೆಯಿದ್ದ ಬಂಡೆಗಲ್ಲು ಅವರ ತಲೆಗೆ ಬಡಿದಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೆಸ್ಕಾಂ ಇಲಾಖಾ ಸಿಬ್ಬ್ಂದಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಜ್ಪೆ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Kinnigoli-03081404

Comments

comments

Comments are closed.

Read previous post:
Kinnigoli-03081402
ಏಳಿಂಜೆ : ಬೈಕ್ ಅಪಘಾತ

 ಕಿನ್ನಿಗೋಳಿ : ಮೂಲ್ಕಿ ಠಾಣಾ ವ್ಯಾಪ್ತಿಯ ಮುಂಡ್ಕೂರು ಕಟೀಲು ರಾಜ್ಯ ಹೆದ್ದಾರಿಯ ಏಳಿಂಜೆ ದೇವಳದ ದ್ವಾರದ ಸಮೀಪ ಭಾನುವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ...

Close