ಏಳಿಂಜೆ : ಬೈಕ್ ಅಪಘಾತ

 ಕಿನ್ನಿಗೋಳಿ : ಮೂಲ್ಕಿ ಠಾಣಾ ವ್ಯಾಪ್ತಿಯ ಮುಂಡ್ಕೂರು ಕಟೀಲು ರಾಜ್ಯ ಹೆದ್ದಾರಿಯ ಏಳಿಂಜೆ ದೇವಳದ ದ್ವಾರದ ಸಮೀಪ ಭಾನುವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಬಕ್ ರಸ್ತೆ ಬದಿಯ ಮೈಲುಗಂಬಕ್ಕೆ ಡಿಕ್ಕಿ ಹೊಡೆದು ಮೂಲ್ಕಿ ಬಿಜಾಪುರ ಕಾಲೋನಿಯ ನಿವಾಸಿ ಮಹಾಂತೇಶ್ ( 20) ಮೃತ ಪಟ್ಟಿದ್ದಾರೆ. ಸಹಸವಾರ ಬಸವರಾಜು ಎಂಬವರು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಾಲಾಗಿದ್ದಾರೆ.

ಹುಬ್ಬಳ್ಳಿ ನಿವಾಸಿಗಳಾದ ದಿ. ಹನುಮಂತ ಪವಾರ್ ಹಾಗೂ ದೇವಕಿ ದಂಪತಿಗಳ 3 ಪುತ್ರರಲ್ಲಿ ಕೊನೆಯನಾದ ಮೂಲ್ಕಿ-ಲಿಂಗಪ್ಪಯ್ಯಕಾಡು ನಿವಾಸಿ ಮಹಾಂತೇಶ್ ತನ್ನ ಇನ್ನೂ ರಿಜಿಸ್ಟ್ರೇಷನ್ ಆಗಿರದ ಹೊಂಡಾ ಶೈನ್ ಬೈಕ್‌ನಲ್ಲಿ ಸ್ನೇಹಿತನ ಜೊತೆ ಮುಂಡ್ಕೂರು ಜಾರಿಗೆಕಟ್ಟೆ ಕಡೆಯಿಂದ ಕಿನ್ನಿಗೋಳಿಗೆ ಬರುತ್ತಿದ್ದಾಗ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ನಿಯಂತ್ರಣ ಕಳೆದುಕೊಂಡು ಬೈಕ್ ರಸ್ತೆಯ ಬದಿಯಲ್ಲಿದ್ದ ಮೈಲುಗಲ್ಲಿಗೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಬಡಿದು ಸಮೀಪದ ಮನೆಯ ಆವರಣ ಗೋಡೆಗೆ ಸವರಿ ಬಿದ್ದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಡಿಕ್ಕಿ ಹೊಡೆದ ರಭಸಕ್ಕೆ ಮಹಾಂತೇಶ್ ತಲೆ ಒಡೆದು ಸ್ಥಳದಲ್ಲೇ ಸಾವನ್ನಪ್ಪಿದರೆ ಹಿಂಬದಿಯಲ್ಲಿದ್ದ ಯುವಕ ಗಂಭೀರ ಗಾಯಗೊಂಡಿದ್ದಾನೆ. ಬಸವರಾಜು ಸ್ಥಿತಿ ಚಿಂತಾಜನಕವಾಗಿದ್ದು ಎ.ಜೆ. ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಬೈಕ್ ಡಿಕ್ಕಿ ಹೊಡೆದ ಮೈಲುಗಲ್ಲು ತುಂಡಾಗಿ 10 ಅಡಿಗಳಷ್ಟು ದೂರ ಹಾರಿ ಬಿದ್ದಿದ್ದರೆ ಸನಿಹದ ವಿದ್ಯುತ್ ಕಂಬಕ್ಕೆ ಮಹಾಂತೇಶ್ ತಲೆ ಬಡಿದು ಮೆದುಳು ರಸ್ತೆಯಲ್ಲಿ ಚೆಲ್ಲಲ್ಪಟ್ಟಿದೆ. ಯುವಕರು ಜಾಲಿರೈಡ್ ದೆಸೆಯಿಂದಾಗಿ ಹಲವು ದುರ್ಘಟನೆಗಳು ಈಡಾಗುತ್ತಿರುವ ಘಟನೆಗಳೂ ಹೆಚ್ಚುತ್ತಿವೆ. ಸುರತ್ಕಲ್ ಟ್ರ್ರಾಫಿಕ್ ಪೋಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿ ಕೇಸು ದಾಖಲಿಸಿದ್ದಾರೆ.

Kinnigoli-03081401 Kinnigoli-03081402 Kinnigoli-03081403

 

Comments

comments

Comments are closed.

Read previous post:
Kinnigoli-2081405
ಪಂಜ ಹೊಸ ರಸ್ತೆ ಮುಳುಗಡೆ

ಕಿನ್ನಿಗೋಳಿ : ಕಳೆದ ಎರಡು ದಿನಗಳಿಂದ ನಿರಂತರ ಮಳೆ ಬಂದು ನೆರೆ ಭೀತಿ ಉಂಟು ಮಾಡಿದ ಕಿನ್ನಿಗೋಳಿ ಬಳಿಯ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಂಜ , ಉಲ್ಯ...

Close