ಪೋಂಪೈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಿನಾಚರಣೆ

ಕಿನ್ನಿಗೋಳಿ: ಪೊಂಪೈ ಕಾಲೇಜು ಐಕಳದ ಮಾನವಿಕ ವಿಭಾಗದ ವಿದ್ಯಾರ್ಥಿಗಳ ದಿನಾಚರಣೆಯು ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. ಕಾಲೇಜಿನ ಪ್ರಾಂಶುಪಾಲರಾದ ಡಾ|ಜೆ.ಸಿ.ಮಿರಾಂಡ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಪ್ರಾಧ್ಯಾಪಕರಾದ ನೇಮಿಚಂದ್ರ ಗೌಡ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಂಬಿಕೆ, ಆತ್ಮವಿಶ್ವಾಸ ಹಾಗೂ ಸಾಧಿಸುವ ಛಲ ವಿದ್ಯಾರ್ಥಿ ಜೀವನದಲ್ಲಿ ರೂಪಿಸಿಕೊಳ್ಳಬೇಕೆಂದು ಹಿತವಚನ ನುಡಿದರು. ಈ ಸಂದರ್ಭದಲ್ಲಿ ಮಾತನಾಡಿದ  ಹರ್ಷಿತ  ವಿದ್ಯಾರ್ಥಿಗಳು ತಮ್ಮನ್ನು ಕಾಲೇಜಿನ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕೆಂದು ಸಲಹೆಯಿತ್ತರು.  ಪ್ರೊಫೆಸರ್ ಪುರುಷೋತ್ತಮ ಕೆ.ವಿ ಮತ್ತು  ಪ್ರಾಧ್ಯಾಪಕ  ವಿಶ್ವಿತ್ ಶೆಟ್ಟಿ ಉಪಸ್ಥಿತರಿದ್ದರು.

ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಹೂ ಗುಚ್ಛ ಹಾಗೂ ಶುಭಾಶಯ ಪತ್ರಗಳನ್ನು ನೀಡಿ ಸ್ವಾಗತಿಸಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಯಾನ ಹಾಗೂ ಗ್ಲೋರಿಯ ಕಾರ್ಯಕ್ರಮ ನಿರೂಪಿಸಿದರು. ಸಿ. ಪ್ರಿಯಾ ಇವರು ಸ್ವಾಗತಿಸಿ ಸಿ. ಜೋಸೆಪೈನ್ ಇವರು ಧನ್ಯವಾದ ಸಮರ್ಪಿಸಿದರು.

Kinnigoli 04071404

 

Comments

comments

Comments are closed.

Read previous post:
Kinnigoli 04071403
ಬಿಲ್ಲವ ಸಂಘ 2014-15 ರ ಪದಾಧಿಕಾರಿಗಳು

ಮೂಲ್ಕಿ: ಇಲ್ಲಿನ ಪ್ರತಿಷ್ಠಿತ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ 2014-15 ರ ಸಾಲಿನ ನೂತನ ಅಧ್ಯಕ್ಷರಾಗಿ ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ಸಾಹಿತಿ ಹರಿಶ್ಚಂದ್ರ ಪಿ.ಸಾಲ್ಯಾನ್‌ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ....

Close