ಕಿನ್ನಿಗೋಳಿಯಲ್ಲಿ ತಾಳ ಮದ್ದಲೆ ಸಪ್ತಾಹ

ಕಿನ್ನಿಗೋಳಿ: ಕರ್ಣಾಟಕ ಬ್ಯಾಂಕ್ ಚೀಫ್ ಜನರಲ್ ಮ್ಯಾನೇಜರ್ ಎಂ. ಎಸ್. ಮಹಾಬಲೇಶ್ವರ ಭಟ್ ಹೇಳಿದರು. ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿಯ ಯಕ್ಷಲಹರಿ -ಯುಗಪುರುಷ ಇದರ ಆಶ್ರಯದಲ್ಲಿ ಯಕ್ಷಲಹರಿಯ ಇಪ್ಪತ್ತನಾಲ್ಕನೇ ವಾರ್ಷಿಕೋತ್ಸವ ಸಂಭ್ರಮ ಆಶ್ರಯದಲ್ಲಿ ಕರ್ಣಾಟಕ ಬ್ಯಾಂಕ್ ಯಕ್ಷಗಾನ ತಾಳಮದ್ದಲೆ ಸಪ್ತಾಹ ವಾಚಮರ್ಥೋನುಧಾವತಿ ಸಮಾರೋಪ ಸಮಾರಂಭ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಹವ್ಯಾಸಿ ಕಲಾವಿದ ಎಸ್. ರಾಮ ಭಟ್‌ರವರನ್ನು ಕಲಾವಿದ ಸಮ್ಮಾನ, ಐ. ಓ. ಸಿ ಬ್ಯಾಂಕ್‌ನ ಪ್ರಾಂತೀಯ ಪ್ರಬಂಧಕ ಪಿ. ವಿ. ಸುಧಾಕರ್‌ರವರಿಗೆ ವಿಶೇಷ ಗೌರವಾರ್ಪಣೆ , ಐಕಳ ಗಣೇಶ್ ಶೆಟ್ಟಿ , ರಾಮಭಟ್ ಕಲಾಪೋಷಕ ಸಮ್ಮಾನ ನಡೆಯಿತು.
ವಿಶ್ವ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮುಂಬಯಿ ಉದ್ಯಮಿ ತಾಳಿಪಾಡಿಗುತ್ತು ಧನಪಾಲ ಶೆಟ್ಟಿ ವಿದ್ಯಾರ್ಥಿ ವೇತನ ವಿತರಿಸಿದರು. ಕಟೀಲಿನ ಅರ್ಚಕ ವೆ. ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ , ಧರ್ಮದರ್ಶಿ ಹರಿಕೃಷ್ಣ ಪುನರೂರು, ಮುಂಬಯಿ ಉದ್ಯಮಿ ರತ್ನ ಎಸ್. ಕೋಟ್ಯಾನ್, ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಕೆನರಾ ಬ್ಯಾಂಕ್ ಶಾಖಾ ಪ್ರಬಂಧಕ ಕೆ. ಎನ್. ಸುಧಾಕರ, ಕಿನ್ನಿಗೋಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಶಾಖಾ ಪ್ರಬಂಧಕ ಕೇಶವ ನಾಯ್ಕ್ , ಮಂಗಳೂರು ದೇರೆಬಲ್ ಐ. ಓ. ಬಿ ಬ್ಯಾಂಕ್ ಶಾಖೆಯ ಪ್ರಬಂಧಕ ಪಿ. ಕೆ. ರವೀಂದ್ರ ಪೈ, ವೆ. ಮೂ. ಪಂಜ ಭಾಸ್ಕರ ಭಟ್, ಯಕ್ಷಲಹರಿಯ ಉಪಾಧ್ಯಕ್ಷ ಪಿ. ಸತೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು. ಯಕ್ಷಲಹರಿಯ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಸ್ವಾಗತಿಸಿದರು. ಯುಗಪುರುಷದ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಕಾರ್ಯದರ್ಶಿ ಶ್ರೀಧರ ಡಿ. ಎಸ್ ವಂದಿಸಿದರು. ಡಾ| ಎಂ. ರಾಧಾಕೃಷ್ಣ ಭಟ್ ಪೆರ್ಲ ಹಾಗೂ ಕೆ. ಜಗದೀಶ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.

Kinnigoli 04071406 Kinnigoli 04071407

Comments

comments

Comments are closed.