ಬಿಲ್ಲವ ಸಂಘ 2014-15 ರ ಪದಾಧಿಕಾರಿಗಳು

ಮೂಲ್ಕಿ: ಇಲ್ಲಿನ ಪ್ರತಿಷ್ಠಿತ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ 2014-15 ರ ಸಾಲಿನ ನೂತನ ಅಧ್ಯಕ್ಷರಾಗಿ ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ಸಾಹಿತಿ ಹರಿಶ್ಚಂದ್ರ ಪಿ.ಸಾಲ್ಯಾನ್‌ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮೂಲ್ಕಿ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಹರಿಶ್ಚಂದ್ರ ವಿ.ಕೋಟ್ಯಾನ್‌ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.
ಉಪಾಧ್ಯಕ್ಷರಾಗಿ ಗೋಪಿನಾಥ ಪಡಂಗ ಹಾಗೂ ವಾಸು ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಕೊಕ್ಕರಕಲ್, ಸಹ ಕಾರ್ಯದರ್ಶಿಯಾಗಿ ನರೇಂದ್ರ ಕೆರೆಕಾಡು, ಕೋಶಾಧಿಕಾರಿಯಾಗಿ ಪ್ರಕಾಶ್ ಸುವರ್ಣ, ಸಹ ಕೋಶಾಧಿಕಾರಿಯಾಗಿ ಸರೋಜಿನಿ ಸುವರ್ಣರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಿಕಟಪೂರ್ವ ಅಧ್ಯಕ್ಷ ಯದೀಶ್ ಅಮಿನ್ ಕೊಕ್ಕರಕಲ್‌ರವರು ತಮ್ಮ ಅವಧಿಯಲ್ಲಿನ ಕಾರ್ಯಯೋಜನೆಗಳ ಬಗ್ಗೆ ಮಾತನಾಡಿ ಸರ್ವರ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಮಾಜಿ ಕೋಶಾಧಿಕಾರಿ ಉದಯ ಅಮಿನ್ ಮಟ್ಟು ಉಪಸ್ಥಿತರಿದ್ದರು. ನಿರ್ಗಮದ ಪ್ರಧಾನ ಕಾರ್ಯದರ್ಶಿ ಗೋಪಿನಾಥ ಪಡಂಗ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಸಹ ಕಾರ್ಯದರ್ಶಿ ವಾಮನ ನಡಿಕುದ್ರು ವಂದಿಸಿದರು.

Kinnigoli 04071403

Narendra Kerekadu

Comments

comments

Comments are closed.

Read previous post:
Kinnigoli 04071402
ರಾಮನಾಮ ಭಜನಾ ಸಂಕೀರ್ಥನೆ ಮತ್ತು ತೈಲಾಭೀಶೇಕ

ಮೂಲ್ಕಿ: ಶ್ರಾವಣ  ಪ್ರಯುಕ್ತ ಲೋಕ ಕಲ್ಯಾಣಾರ್ಥ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ದೇವಸ್ಥಾನದ ಶ್ರೀ ಆಂಜನೇಯ ಸನ್ನಿಧಿಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ರಾಮನಾಮ ಭಜನಾ ಸಂಕೀರ್ಥನೆ ಮತ್ತು ತೈಲಾಭೀಶೇಕ...

Close