ಕಷ್ಟದ ದಿನಗಳ ಮಹತ್ವವನ್ನು ತಿಳಿಸಬೇಕು

ಕಿನ್ನಿಗೋಳಿ: ಇಂದಿನ ಆಧುನಿಕ ಯುಗದಲ್ಲಿ ತುಳುನಾಡಿನ ಆಚರಣೆಗಳು ಕಣ್ಮರೆಯಾಗುತ್ತಿದ್ದು,ನದಿಗಳು ಹಾಗೂ ಪರ್ವತ ಶ್ರೇಣಿಗಳನ್ನು ಆಶ್ರಯಿಸಿ ಸುಂದರ ಪ್ರಕೃತಿ ರಮ್ಯ ತುಳುನಾಡಿನ ಉತ್ತಮ ಆಚಾರ ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ಕರ್ನಾಟಕ ತುಳು ಎಕೆಡೆಮಿಯ ಮಾಜೀ ಸದಸ್ಯ ದಯಾನಂದ ಕತ್ತಲ್‌ಸಾರ್ ಹೇಳಿದರು.ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ.) ಮಂಗಳೂರು ಇದರ ವತಿಯಿಂದ ಕಿನ್ನಿಗೋಳಿ ವಲಯದ ನಡುಗೋಡು,ಐಕಳ,ಏಳಿಂಜ ಒಕ್ಕೂಟ ಹಾಗೂ ಮಹಿಳಾ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಕಿನ್ನಿಗೋಳಿಯ ಯುಗಪುರುಷದಲ್ಲಿ ನಡೆದ‘ಆಟಿಡೊಂಜಿ ನೆನಪುದ ಲೇಸ್’ ಕಾರ‍್ಯಕ್ರಮದಲ್ಲಿ ಮಾತನಾಡಿದರು.ಇಂದಿನ ಆಧುನಿಕ ಯುಗದಲ್ಲಿ ತುಳುನಾಡಿನ ಆಚರಣೆಗಳಲ್ಲಿ ಕೃಷಿ ಬದುಕು ಕಣ್ಮರೆಯಾಗುತ್ತಿದ್ದು ಹಿಂದಿನ ಕಾಲದ ಆಟಿಯ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಆಟಿಯ ದಿನಗಳ ಮಹತ್ವವನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಬೇಕು.ನದಿಗಳು ಹಾಗೂ ಪರ್ವತ ಶ್ರೇಣಿಗಳನ್ನು ಆಶ್ರಯಿಸಿ ಸುಂದರ ಪ್ರಕೃತಿಯಲ್ಲಿರುವ ಔಷಧಿಗಳಿಂದ ಸರ್ವ ರೋಗಗಳು ನಾಶವಾಗುತ್ತದೆ. ರಮ್ಯ ತುಳುನಾಡಿನ ಉತ್ತಮ ಆಚಾರ ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು.ಕಾರ‍್ಯಕ್ರಮವನ್ನು ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ದೀಪ ಬೆಳಗಿಸಿ ‘ಚೆನ್ನೆಮಣೆ’ಆಡುವ ಮೂಲಕ ಉದ್ಘಾಟಿಸಿದರು.ವೇದಿಕೆಯಲ್ಲಿ ಗ್ರಾಮಾಭಿವೃದ್ದಿ ಯೋಜನೆ ಧರ್ಮಸ್ಥಳದ ಪ್ರಗತಿ ನಿಧಿ ನಿರ್ದೇಶಕರಾದ ಸಂಪತ್ ಕುಮಾರ್,ಕಿನ್ನಿಗೋಳಿ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕರುಣಾಕರ ಶೆಟ್ಟಿ,ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಯ ನಿರ್ದೇಶಕಿ ಡಾ.ಸಿ.ಜೀವಿತಾ,ಒಕ್ಕೂಟದ ಅಧ್ಯಕ್ಷರಾದ ವಾಸು ಸಾಲ್ಯಾನ್,ಹರೀಶ ಅಂಚನ್,ಐಕಳ-ಏಳಿಂಜ ಒಕ್ಕೂಟದ ಅಧ್ಯಕ್ಷೆ ಪದ್ಮಿನಿ ವಸಂತ ಉಪಸ್ಥಿತರಿದ್ದರು.ದೀಕ್ಷಿತಾ ಜೋಗಿ ಸ್ವಾಗತಿಸಿದರು,ದಿವ್ಯಾ ಧನ್ಯವಾದ ಅರ್ಪಿಸಿದರು.ಶುಭಲತಾ ಕಾರ‍್ಯಕ್ರಮ ನಿರ್ವಹಿಸಿದರು.ಬಳಿಕ ಯೋಜನೆಯ ಒಕ್ಕೂಟದ ಸದಸ್ಯರಿಂದ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯಿತು. ತುಳುನಾಡಿನ ಆಟಿಯ ವಿವಿದ ತಿನಿಸುಗಳು ಗಮನಸೆಳೆದವು.

Kinnigoli 05081401

Comments

comments

Comments are closed.

Read previous post:
Kinnigoli-05081401
ಸಾಂಘಿಕ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು

 ಕಿನ್ನಿಗೋಳಿ : ವ್ಯಕ್ತಿತ್ವ ವಿಕಸನ, ನಾಯಕತ್ವ ಹಾಗೂ ಸಾಂಘಿಕ ಪ್ರಯತ್ನ ಮೈಗೂಡಿದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಸಾಂಸ್ಕ್ರತಿಕ ಸ್ಪರ್ಧೆ, ಕಾರ್ಯಕ್ರಮಗಳಿಂದ ಆಯೋಜಿಸುವುದರಿಂದ ಸಂಘಟನೆಗಳು ಮತ್ತಷ್ಟು ಬಲಗೊಳ್ಳುತ್ತವೆ. ಎಂದು...

Close