ಸಾಂಘಿಕ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು

 ಕಿನ್ನಿಗೋಳಿ : ವ್ಯಕ್ತಿತ್ವ ವಿಕಸನ, ನಾಯಕತ್ವ ಹಾಗೂ ಸಾಂಘಿಕ ಪ್ರಯತ್ನ ಮೈಗೂಡಿದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಸಾಂಸ್ಕ್ರತಿಕ ಸ್ಪರ್ಧೆ, ಕಾರ್ಯಕ್ರಮಗಳಿಂದ ಆಯೋಜಿಸುವುದರಿಂದ ಸಂಘಟನೆಗಳು ಮತ್ತಷ್ಟು ಬಲಗೊಳ್ಳುತ್ತವೆ. ಎಂದು ಚಂದ್ರಶೇಖರ ಸುವರ್ಣ ಹೇಳಿದರು
ಸೌತ್ ಕೆನೆರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ದಕ್ಷಿಣಕನ್ನಡ-ಉಡುಪಿ ಜಿಲ್ಲೆಯ ಮುಲ್ಕಿ ವಲಯದ ದಶಮಾನೋತ್ಸವ ವರ್ಷದ ಅಂಗವಾಗಿ ಮಂಗಳವಾರ ಕಿನ್ನಿಗೋಳಿ ಯುಗಪುರುಷ ಸಭಾ ಭಾವನದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕ್ರತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಸೌತ್ ಕೆನೆರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ವಾಸುದೇವ ರಾವ್, ಕಾರ್ಯದರ್ಶಿ ಹರ್ಷಾಕರ್, ಜಿಲ್ಲಾ ಉಪಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್, ಕರುಣಾಕರ ಗೌಡ, ಜಿಲ್ಲಾ ಸಾಂಸ್ಕ್ರತಿಕ ಕಾರ್ಯದರ್ಶಿಗಳಾದ ದತ್ತಾತ್ರೇಯ ಕುಮಾರ್, ದಯಾನಂದ ಬಂಟ್ವಾಳ, ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ನಾಗೇಶ್ ಕೋಟಾ, ಮಧು ಮಂಗಳೂರು, ವಿವಿಧ ವಲಯದ ಅಧ್ಯಕ್ಷರುಗಳಾದ ಶಶಿಕುಮಾರ್ ಸುರತ್ಕಲ್, ಟಿಕ್ಕು ಮಂಗಳೂರು, ನಾಗರಾಜ್ ಕುಂದಾಪುರ, ವಿಲ್ರೆಡ್ ಮೆಂಡೋನ್ಸಾ ಮೂಡಬಿದ್ರಿ, ಅರುಣ್ ಕುಮಾರ್ ಉಳ್ಳಾಲ, ಹರೀಶ್ ಪುತ್ತೂರು, ಮೂಲ್ಕಿ ವಲಯದ ಸ್ಥಾಪಕಾಧ್ಯಕ್ಷ ಸೇಸಪ್ಪ ಸಾಲ್ಯಾನ್, ಕಾರ್ಯದರ್ಶಿ ಕೆ.ಬಿ. ಸುರೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಕಾಶ್ ಸುವರ್ಣ ಉಪಸ್ಥಿತರಿದ್ದರು.
ಮುಲ್ಕಿ ವಲಯದ ಅಧ್ಯಕ್ಷ ನವೀನ್ ಕುಮಾರ್ ಕಟೀಲ್ ಸ್ವಾಗತಿಸಿದರು ಯೋಗೀಶ್ ಪಾವಂಜೆ ವಂದಿಸಿದರು, ಮುಲ್ಕಿ ವಲಯದ ಪ್ರಮೋಟರ್ ಲೈನಲ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

Kinnigoli-05081401

Kinnigoli-05081403 Kinnigoli-05081404 Kinnigoli-05081405

Comments

comments

Comments are closed.

Read previous post:
Kinnigoli-05081402
ಕಿನ್ನಿಗೋಳಿ ರೈತರ ಕಲಿಕಾ ಪ್ರವಾಸ

 ಕಿನ್ನಿಗೋಳಿ :  ದ. ಕ. ಜಿಲ್ಲಾ ಪಂಚಾಯತ್ ಜಲಾನಯನ ಅಭಿವೃದ್ಧಿ ಇಲಾಖೆ, ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆಯಡಿ ರೈತರ ಕಲಿಕಾ ಪ್ರವಾಸಕ್ಕೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಸಚಿವ ಅಭಯಚಂದ್ರ...

Close