ಹೊಸ ತಂತ್ರಜ್ಞಾನಕ್ಕೆ ಕಾರ್ಯಶೈಲಿ ಬದಲಾಯಿಸಬೇಕಾಗಿದೆ.

ಕಿನ್ನಿಗೋಳಿ: ಕಂಪ್ಯೂಟರ್ ತಂತ್ರಜ್ಞಾನದ ಯುಗದಲ್ಲಿ ಫೋಟೋಗ್ರಾಫರ್‌ಗಳ ಮೇಲೆ ಸಾಕಷ್ಟು ಒತ್ತಡವಿದ್ದು ಹೊಸ ತಂತ್ರಜ್ಞಾನಕ್ಕೆ ತಮ್ಮ ಕಾರ್ಯಶೈಲಿ ಬದಲಾಯಿಸಬೇಕಾಗಿದೆ. ಎಂದು ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.
ಸೌತ್ ಕೆನೆರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ದಕ್ಷಿಣಕನ್ನಡ-ಉಡುಪಿ ಜಿಲ್ಲೆಯ ಮುಲ್ಕಿ ವಲಯದ ದಶಮಾನೋತ್ಸವ ವರ್ಷದ ಅಂಗವಾಗಿ ಮಂಗಳವಾರ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಾಂಸ್ಕ್ರತಿಕ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಸಹಾಯಕ ಧರ್ಮಗುರು ಫಾ. ಅಶೋಕ್ ರಾಯನ್ ಕ್ರಾಸ್ತಾ ಶುಭಾಶಂಸನೆಗೈದರು. ಈ ಸಂದರ್ಭ ಖ್ಯಾತ ಛಾಯಾಚಿತ್ರಗ್ರಾಹಕ ಹಾಗೂ ಸಂಪನ್ಮೂಲ ವ್ಯಕ್ತಿ ವಿವೇಕ್ ವಿಕ್ಟರ್ ಸಿಕ್ವೇರಾ ಮಂಗಳೂರು ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಉತ್ತರಿಸಿದ ವಿವೇಕ್ ಸಿಕ್ವೇರಾ ವೃತ್ತಿಯ ಬಗ್ಗೆ ಕೀಳರಿಮೆ ಇರಿಸಿಕೊಳ್ಳದೆ ಶೃದ್ಧೆ, ಸಂಯಮ ಹಾಗೂ ಸತತ ಪ್ರಯತ್ನದಿಂದ ಸಾಧನೆಯ ಉನ್ನತ ಶಿಖರವೇರಬಹುದು ಎಂದು ಹೇಳಿದರು.
ಹಾಗೂ ಮೂಲ್ಕಿ ವಲಯದ ಮಾಜಿ ಅಧ್ಯಕ್ಷರುಗಳಾದ ಸೇಸಪ್ಪ ಸಾಲ್ಯಾನ್, ಭಾಗ್ಯವಾನ್ ಸನಿಲ್, ರಫಾಯಲ್ ರೆಬೆಲ್ಲೊ, ನವೀನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಸುರತ್ಕಲ್ ನಾಗಭೂಷಣ ರೆಡ್ಡಿ ಪ್ರಾಯೋಜಿತ ತೋಕೂರು ಶ್ರೀ ಸುಬ್ರಹ್ಮಣ್ಯ ಅಂಗನವಾಡಿಯ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಜುಲೈಯಲ್ಲಿ ಮುಲ್ಕಿ ವಲಯದ ದಶಮಾನೊತ್ಸವದ ಅಂಗವಾಗಿ ನಡೆದ ಕೆಸರು ಗದ್ದೆ ಕ್ರೀಡೋತ್ಸವದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೌತ್ ಕೆನೆರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್‌ನ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಉಳ್ಳಾಲ ವಲಯ ಪ್ರಥಮ ಹಾಗೂ ಕಾಪು ವಲಯ ದ್ವಿತೀಯ ಪ್ರಶಸ್ತಿ ಪಡೆದು ಕೊಂಡರು.
ಸೌತ್ ಕೆನೆರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ವಾಸುದೇವ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ದಯಾನಂದ ಕತ್ತಲ್‌ಸಾರ್, ಮೂಲ್ಕಿ ಪೋಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಜಿಲ್ಲಾ ಕಾರ್ಯದರ್ಶಿ ಹರ್ಷಾಕರ್, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ದತ್ತಾತ್ರೇಯ ಕುಮಾರ್, ದಯಾನಂದ ಬಂಟ್ವಾಳ, ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ನಾಗೇಶ್ ಕೋಟಾ, ಮಧು ಮಂಗಳೂರು, ವಿಲ್ಸನ್, ಕೋಶಾಧಿಕಾರಿ ಜಗನ್ನಾಥ, ಮುಲ್ಕಿ ವಲಯ ಸಾಂಸ್ಕೃತಿಕ ಕಾರ್ಯದರ್ಶಿ ಪ್ರಕಾಶ್ ಸುವರ್ಣ ಉಪಸ್ಥಿತರಿದ್ದರು.
ಮುಲ್ಕಿ ವಲಯದ ಅಧ್ಯಕ್ಷ ನವೀನ್ ಕುಮಾರ್ ಕಟೀಲ್ ಸ್ವಾಗತಿಸಿದರು. ಯೋಗೀಶ್ ಪಾವಂಜೆ ವಿಜೇತರ ವಿವರ ನೀಡಿದರು. ಕಾರ್ಯದರ್ಶಿ ಕೆ. ಬಿ. ಸುರೇಶ್ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli 06081402 Kinnigoli 06081403 Kinnigoli 06081404 Kinnigoli 06081405Kinnigoli 06081411Kinnigoli 06081406 Kinnigoli 06081407

Kinnigoli 06081409 Kinnigoli 06081410

Kinnigoli-07081409

Comments

comments

Comments are closed.

Read previous post:
Kinnigoli 06081430
ಸಂಸ್ಕೃತಿ, ಆಚರಣೆಗಳಿಂದ ದೂರವಾಗಬಾರದು

ಕಿನ್ನಿಗೋಳಿ : ತುಳುನಾಡಿನ ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ವೈದ್ಯಕೀಯ ಮಹತ್ವವುಳ್ಳ ಆಟಿ ಆಚರಣೆ ಸೂಕ್ತ. ಸಂಸ್ಕೃತಿ, ಆಚರಣೆಗಳಿಂದ ದೂರವಾಗಬಾರದು ಎಂದು ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ವಿಲಿಯಂ ಸಿಕ್ವೇರಾ...

Close