ಪೋಂಪೈ ಕಾಲೇಜಿನಲ್ಲಿ ಆಟಿದ ಕೂಟ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ಮಾನವಿಕ ವಿಭಾಗದ ಆಶ್ರಯದಲ್ಲಿ ಆಟಿದ ಕೂಟ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆಯಿತು. ಕಾಲೇಜು ಪ್ರಿನ್ಸಿಪಾಲ್ ಡಾ. ಜೆ.ಸಿ.ಮಿರಾಂಡ ಹಲಸಿನ ಹಣ್ಣು ತುಂಡರಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಪೊಂಪೈ ಪದವಿಪೂರ್ವ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕ ಸೀತಾರಾಮ ಭಟ್ ಬಿ. ಆಟಿ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು. ತುಳು ಒಗಟು ಬಿಡಿಸುವ ಸ್ಪರ್ದೆ ಹಾಗೂ ತುಳು ಶಬ್ದಾರ್ಥ ಹೇಳುವ ಸ್ಪರ್ದೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳು ತುಳು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಉಪನ್ಯಾಸಕರಾದ ವಿಶ್ವಿತ್ ಶೆಟ್ಟಿ, ಪ್ರೊ. ಯೋಗೀಂದ್ರ ಬಿ , ಪ್ರೊ. ತೋಮಸ್ ಜಿ.ಎಮ್, ಪೊ. ಪುರುಷೋತ್ತಮ ಕೆ.ವಿ., ಮೈಕಲ್ ಪಿಂಟೊ, ಗಣೇಶ್ ಸಾಲಿಯಾನ್, ಧೀರಜ್ ಉಪಸ್ಥಿತರಿದ್ದರು.

Kinnigoli 06081401

 

Comments

comments

Comments are closed.

Read previous post:
Kinnigoli 05081401
ಕಷ್ಟದ ದಿನಗಳ ಮಹತ್ವವನ್ನು ತಿಳಿಸಬೇಕು

ಕಿನ್ನಿಗೋಳಿ: ಇಂದಿನ ಆಧುನಿಕ ಯುಗದಲ್ಲಿ ತುಳುನಾಡಿನ ಆಚರಣೆಗಳು ಕಣ್ಮರೆಯಾಗುತ್ತಿದ್ದು,ನದಿಗಳು ಹಾಗೂ ಪರ್ವತ ಶ್ರೇಣಿಗಳನ್ನು ಆಶ್ರಯಿಸಿ ಸುಂದರ ಪ್ರಕೃತಿ ರಮ್ಯ ತುಳುನಾಡಿನ ಉತ್ತಮ ಆಚಾರ ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದೆ...

Close