ಸಂಸ್ಕೃತಿ, ಆಚರಣೆಗಳಿಂದ ದೂರವಾಗಬಾರದು

ಕಿನ್ನಿಗೋಳಿ : ತುಳುನಾಡಿನ ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ವೈದ್ಯಕೀಯ ಮಹತ್ವವುಳ್ಳ ಆಟಿ ಆಚರಣೆ ಸೂಕ್ತ. ಸಂಸ್ಕೃತಿ, ಆಚರಣೆಗಳಿಂದ ದೂರವಾಗಬಾರದು ಎಂದು ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ವಿಲಿಯಂ ಸಿಕ್ವೇರಾ ಹೇಳಿದರು.
ಕಿನ್ನಿಗೋಳಿ ರೋಟರಿ, ಇನ್ನರ್ ವೀಲ್ ಹಾಗೂ ರೋಟರ‍್ಯಾಕ್ಟ್ ಕ್ಲಬ್ ಜಂಟೀ ಆಶ್ರಯದಲ್ಲಿ ಕಿನ್ನಿಗೋಳಿ ಸಹಕಾರ ಸೌಧದಲ್ಲಿ ಸೋಮವಾರ ನಡೆದ ಆಟಿ ಆಚರಣೆ ಸಂದರ್ಭ ಮಾತನಾಡಿದರು.
ಕೊಡೆತ್ತೂರು ಸುಶೀಲಾ ಪೂಜಾರಿ ಮತ್ತು ಸುನಂದ ಕರ್ಕೆರಾ ಅವರು ತುಳು ಸಂಸ್ಕ್ರತಿಯ ಭಾಗವಾದ ಆಟಿ ಆಚರಣೆ ಹಾಗು ವಿವಿಧ ರೀತಿಯ ಪಾಡ್ದನ ಒಗಟುಗಳ ಮೂಲಕ ಹಾಡಿ ಹಿಂದಿನ ಸಂಸ್ಕ್ರತಿಯ ಸಾರವನ್ನು ತೆರೆದಿಟ್ಟರು. ರೋಟರಿ ಜಿಲ್ಲೆ 3180 ವಲಯ 3 ರ ವಲಯ ಸೇನಾನಿ ಶರತ್ ಶೆಟ್ಟಿ, ರೋಟರಿ ಕ್ಲಬ್ ಕಾರ್ಯದರ್ಶಿ ಗಂಗಾಧರ ಶೆಟ್ಟಿ, ಇನ್ನರ್ ವೀಲ್ ಅಧ್ಯಕ್ಷೆ ವೀಣಾ ಬಿ. ಶೆಟ್ಟಿ, ರೋಟರ‍್ಯಾಕ್ಟ್ ಅಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

Kinnigoli 06081430

Kinnigoli-06081431

Comments

comments

Comments are closed.

Read previous post:
Kinnigoli 06081401
ಪೋಂಪೈ ಕಾಲೇಜಿನಲ್ಲಿ ಆಟಿದ ಕೂಟ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ಮಾನವಿಕ ವಿಭಾಗದ ಆಶ್ರಯದಲ್ಲಿ ಆಟಿದ ಕೂಟ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆಯಿತು. ಕಾಲೇಜು ಪ್ರಿನ್ಸಿಪಾಲ್ ಡಾ. ಜೆ.ಸಿ.ಮಿರಾಂಡ ಹಲಸಿನ ಹಣ್ಣು...

Close