ಎನ್ ಸಿ ಸಿ ವಿದ್ಯಾರ್ಥಿಗಳಿಂದ ಕಾಲ್ನಡಿಗೆ

ಕಿನ್ನಿಗೋಳಿ: ಪೋಂಪೈ ಕಾಲೇಜು ಐಕಳ ಎನ್ ಸಿ ಸಿ ನೌಕಾದಳದ ವಿದ್ಯಾರ್ಥಿಗಳಿಂದ ಆರೋಗ್ಯಕ್ಕಾಗಿ ಕಾಲ್ನಡಿಗೆ ಕಾರ‍್ಯಕ್ರಮವು ಇತ್ತೀಚೆಗೆ ಜರಗಿತು. ವಿದ್ಯಾರ್ಥಿಗಳಲ್ಲಿ ಆರೋಗ್ಯ ಕಾಳಜಿ, ಪರಿಸರ ಪ್ರೇಮ, ಸಾಹಸ ಮನೋಭಾವ, ನಾಯಕತ್ವ, ಏಕತೆ ಮತ್ತು ಶಿಸ್ತು ಮುಂತಾದ ಮೌಲ್ಯಗಳನ್ನು ಬೆಳೆಸುವ ದೃಷ್ಟಿಯಿಂದ ಹಮ್ಮಿಕೊಂಡ ಈ ಕಾಲ್ನಡಿಗೆಯು ಕಿನ್ನಿಗೋಳಿ ದಾಮಸ್ ಕಟ್ಟೆಯಿಂದ ಐಕಳ ಕೋರೆ ಮೂಲಕವಾಗಿ ಕೊಟ್ರ್ರಪಾಡಿಯಾಗಿ ಮುಂದೆ ಪೊಸ್ರಾಲ್ ರಸ್ತೆಯಲ್ಲಿ ಸಾಗಿ ಜಾರಿಗೆಕಟ್ಟೆಯಲ್ಲಿ ಕೊನೆಗೊಂಡಿತು. ಸುಮಾರು 20 ಕಿಲೋ ಮೀಟರ್‌ದೂರದ ಈ ನಡಿಗೆಯಲ್ಲಿ 37 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಐಕಳ ಕೋರೆಗೆ ಭೇಟಿನೀಡಿದ ತಂಡವು ಅಲ್ಲಿ ನಡೆಯುವ ಜಲ್ಲಿ ಕಲ್ಲು ಕೋರೆ ಉದ್ಯಮದ ಬಗ್ಗೆ ಮಾಹಿತಿ ಪಡೆದುಕೊಂಡರು. ಕೊಟ್ರಪಾಡಿ ಸಮೀಪದ ಮುಗುಳಿ ಗುಡ್ಡಕ್ಕೆ ಚಾರಣವನ್ನು ಕೈಗೊಂಡ ತಂಡ ಆ ಪ್ರದೇಶದಲ್ಲಿ ಹಿಂದೆ ಆದಿವಾಸಿ ಜನರು ವಾಸಿಸುತ್ತಿದ್ದ ಕೆಲವು ಕುರುಹುಗಳನ್ನು ವೀಕ್ಷಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಜೋನ್ ಕ್ಲಾರೆನ್ಸ್ ಮಿರಾಂಡ ಇವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡ ಈ ಜಾಥಾಕ್ಕೆ ಎನ್ ಸಿ ಸಿ ಅಧಿಕಾರಿ ಸಬ್. ಲೆ. ಪುರುಷೋತ್ತಮ ಕೆ.ವಿ. ಇವರು ಸಂಯೋಜಕರಾಗಿದ್ದರು. ವಿದ್ಯಾರ್ಥಿಗಳೊಂದಿಗೆ ಇತಿಹಾಸ ಪ್ರಾಧ್ಯಾಪಕರಾದ ವಿಶ್ವಿತ್ ಶೆಟ್ಟಿ ಭಾಗವಹಿಸಿದ್ದರು. ಎನ್ ಸಿ ಸಿ ಕೆಡೆಟ್ ಕ್ಯಾಪ್ಟನ್ ಸಚಿನ್ ಯು ಸುವರ್ಣ, ಪಿ.ಒ ಕೆಡೆಟ್‌ಗಳಾದ ಅಂಕಿತ್ ಕೋಟ್ಯಾನ್, ಸುದರ್ಶನ್ , ಪಲ್ಲವಿ, ಮುಂದಾಳತ್ವ ವಹಿಸಿದ್ದರು.

Kinnigoli 07081401

Comments

comments

Comments are closed.

Read previous post:
Kinnigoli 06081409
ಹೊಸ ತಂತ್ರಜ್ಞಾನಕ್ಕೆ ಕಾರ್ಯಶೈಲಿ ಬದಲಾಯಿಸಬೇಕಾಗಿದೆ.

ಕಿನ್ನಿಗೋಳಿ: ಕಂಪ್ಯೂಟರ್ ತಂತ್ರಜ್ಞಾನದ ಯುಗದಲ್ಲಿ ಫೋಟೋಗ್ರಾಫರ್‌ಗಳ ಮೇಲೆ ಸಾಕಷ್ಟು ಒತ್ತಡವಿದ್ದು ಹೊಸ ತಂತ್ರಜ್ಞಾನಕ್ಕೆ ತಮ್ಮ ಕಾರ್ಯಶೈಲಿ ಬದಲಾಯಿಸಬೇಕಾಗಿದೆ. ಎಂದು ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು....

Close