ರಕ್ತಗುಂಪು ವರ್ಗೀಕರಣ ಮತ್ತು ಮಾಹಿತಿ ಶಿಭಿರ

ಮೂಲ್ಕಿ: ಮೂಲ್ಕಿ ಕೋಟೆಕೇರಿಯ ನವದುರ್ಗಾ ಯುವಕವೃಂದದ ಸಂಯೋಜನೆಯಲ್ಲಿ ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ತಜ್ಞರಿಂದ ಮೂಲ್ಕಿ ನಾರಾಯಣಗುರು ಸಂಯುಕ್ತ ಪದವಿಪೂರ್ವ ಕಾಲೇಜಿನ ಸುಮಾರು 1500 ವಿದ್ಯಾರ್ಥಿಗಳಿಗೆ ರಕ್ತಗುಂಪು ವರ್ಗೀಕರಣ ಮತ್ತು ಮಾಹಿತಿ ಶಿಭಿರ ಕಾರ್ಯಕ್ರಮ ನಡೆಯಿತು. ಕಾಲೇಜು ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್,ಕಾಲೇಜಿನ ಪ್ರಾಂಶುಪಾಲೆ ಪ್ರೊ. ಶಶಿಲೇಖಾ, ನವದುರ್ಗಾ ಯುವಕವೃಂದದ ಉಪಾಧ್ಯಕ್ಷ ಜಯ.ಸಿ.ಪೂಜಾರಿ, ಸಹ ಕಾರ್ಯದರ್ಶಿಸುರೇಶ್ ಶೇರಿಗಾರ್ , ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಹರ್ಷರಾಜ ಶೆಟ್ಟಿ, ಜಿಎಂ.ಸಂತೋಷ್.ಎನ್. ಪೂಜಾರಿ, ಚಿದಾನಂದ ,ಅನುಶ್ರೀ ಹಾಗೂ ರಕ್ತ ಪರೀಕ್ಷೆ ವಿಭಾಗದ ತಜ್ಞರು ಉಪಸ್ಥಿತರಿದ್ದರು.

Kinnigoli-07081405

Bhagyavan Sanil

Comments

comments

Comments are closed.

Read previous post:
ಹಳೆಯಂಗಡಿಯಲ್ಲಿ ಮಹಿಳಾ ವಿಶೇಷ ಗ್ರಾಮ ಸಭೆ

ಮುಲ್ಕಿ: ಮಹಿಳೆಯರ ಸಬಲೀಕರಣಕ್ಕಾಗಿ ಸರಕಾರ ನೀಡುವ ಪ್ರತಿಯೊಂದು ಅವಕಾಶಗಳನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳಿ ಎಂದು ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ  ಪೂರ್ಣಿಮಾ ಮಧು ಕರೆ ನೀಡಿದರು. ಅವರು...

Close