ಹಳೆಯಂಗಡಿಯಲ್ಲಿ ಮಹಿಳಾ ವಿಶೇಷ ಗ್ರಾಮ ಸಭೆ

ಮುಲ್ಕಿ: ಮಹಿಳೆಯರ ಸಬಲೀಕರಣಕ್ಕಾಗಿ ಸರಕಾರ ನೀಡುವ ಪ್ರತಿಯೊಂದು ಅವಕಾಶಗಳನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳಿ ಎಂದು ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ  ಪೂರ್ಣಿಮಾ ಮಧು ಕರೆ ನೀಡಿದರು.
ಅವರು ಸರಕಾರದ ನಿರ್ದೇಶನದಂತೆ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಹಳೆಯಂಗಡಿ, ಪಾವಂಜೆ, ಸಸಿಹಿತ್ಲು ಗ್ರಾಮದ ಮಹಿಳೆಯರಿಗಾಗಿ ನಡೆದ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಮುಖ್ಯ ಅಥಿತಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ  ಮಾಧುರಿ ಮಹಿಳೆಯರಿಗಾಗಿ ಸರಕಾರ ನೀಡುತ್ತಿರುವ ಸವಲತ್ತುಗಳ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಿಲ್ಲೆಯ ಪ್ರತಿಷ್ಟಿತ ಎನ್.ಜಿ.ಓ ನ ಪ್ರತಿನಿಧಿಗಳಾದ ಆಶಾ ಬೇಕಲ್ ಮತ್ತು ಆಶಾಲತಾ ಸುವರ್ಣ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಗ್ರಾಮ ಪಂಚಾಯತ್ ಸದಸ್ಯರುಗಳಾದ ವನಿತಾ ರಮೇಶ್ ಪಾವಂಜೆ, ಸುಜಾತ ವಾಸುದೇವ್, ಲೀಲಾ ಕೊಳುವೈಲು ಉಪಸ್ಥಿತರಿದ್ದರು. ಪಂಚಾಯತ್‌ನ ದ್ವೀತಿಯ ದರ್ಜೆ ಲೆಕ್ಕ ಸಹಾಯಕಿ ವೇದಾವತಿ ಕಾರ್ಯಕ್ರಮ ನಿರ್ವಹಿಸಿದರು.
ಅಂಗನವಾಡಿ ಕಾರ್ಯಕರ್ತೆಯರಾದ ಗೀತಾ, ಸುಜಾತ, ನಳಿನಾಕ್ಷಿ, ರತ್ನ, ಮಾಲಿನಿ, ಶುಭಾವತಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮೀನಾ ಕೆ. ಕೋಟ್ಯಾನ್, ಸಮಾಜ ಸೇವಕಿ ನಂದ ಪಾಯಸ್ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು.

Kinnigoli 07081405

Prakash Suvarna

Comments

comments

Comments are closed.

Read previous post:
Kinnigoli 07081403
ದೇಶದ ಸವಿಂಧಾನ ಹಾಗೂ ನಡವಳಿ ಬಗ್ಗೆ ಅರಿವು ಮೂಡಿಸಿ

ಮೂಲ್ಕಿ: ಶಾಲಾ ಸಂಸತ್ತಿನಲ್ಲಿ ಭಾಗವಹಿಸಿವ ಮೂಲಕ ದೇಶದ ಸವಿಂಧಾನ ಪದ್ದತಿ ಹಾಗೂ ನಡವಳಿಕೆಯ ಬಗ್ಗೆ ಅರಿವು ಮೂಡಿಸಿಕೊಂಡು ಜನಪ್ರಿನಿಧಿಯಾಗಿ ಅಥವಾ ಉತ್ತಮ ಜನಪ್ರತಿನಿಧಿಯಾಗಿ ಆಯ್ಕೆಯನ್ನು ಮಾಡುವ ಮೂಲಕ...

Close