ಪರಿಸರ ಶುಚಿಯಾಗಿಡಲು ಸಾರ್ವಜನಿಕರ ಸಹಭಾಗಿತ್ವ ಮುಖ್ಯ

ಮೂಲ್ಕಿ: ಪರಿಸರವನ್ನು ತ್ಯಾಜ್ಯ ಮುಕ್ತವನ್ನಾಗಿಸುವುದೇ ಅಲ್ಲದೆ ಶುಚಿಯಾಗಿಡುವುದರಿಂದ ರೋಗಗಳನ್ನು ತಡೆಗಟ್ಟಬಹುದು ಇದಕ್ಕೆ ಸಾರ್ವಜನಿಕ ಸಹಭಾಗಿತ್ವ ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಚ್.ಎಸ್.ಶಿವಕುಮಾರ್ ಹೇಳಿದರು.
ಅವರು ಮೂಲ್ಕಿ ಪ.ಪಂ. ಸಭಾಂಗಣದಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆ ಇವರ ಆಶ್ರಯದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಮಂಗಳೂರು,ಮೂಲ್ಕಿ ಪಟ್ಟಣ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಸಮುದಾಯ ಆರೋಗ್ಯ ಕೇಂದ್ರ ಮೂಲ್ಕಿ ಇದರ ಆಶ್ರಯದಲ್ಲಿ ‘ಮಲೇರಿಯಾ ಮತ್ತು ಡೆಂಗ್ಯೂ ಜಾಗೃತಿ ಅಭಿಯಾನ ’ ಉದ್ಘಾಟಿಸಿ ಮಾತನಾಡಿದರು.ಸಭೆಯ ಅಧ್ಯಕ್ಷತೆಯನ್ನು ಮೂಲ್ಕಿ ಪ.ಪಂ. ಅಧ್ಯಕ್ಷೆ ಮೀನಾಕ್ಷಿ ಬಂಗೇರ ವಹಿಸಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಮಲೇರಿಯಾ ವೀಕ್ಷಕರಾದ ಜಯರಾಮ ಪೂಜಾರಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ|ಅರುಣ್ ಕುಮಾರ್,ಸಮುದಾಯ ಆರೋಗ್ಯ ಕೇಂದ್ರ ಮೂಲ್ಕಿಯ ವೈದ್ಯಾಧಿಕಾರಿ ಡಾ|ಸವಿತ,ಕೆಮ್ರಾಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಭಾಸ್ಕರ ಕೋಟ್ಯಾನ್,ಮಂಗಳೂರಿನ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ರಾಜೀವನ್ ಕೆ.ಪಿ. ಮೂಲ್ಕಿ ಪ.ಪಂ. ಮುಖ್ಯಾಧಿಕಾರಿ ವಾಣಿ ಆಳ್ವ.ಮೂಲ್ಕಿ ಪ.ಪಂ. ಉಪಾಧ್ಯಕ್ಷೆ ವಸಂತಿ ಭಂಡಾರಿ,ಸಮುದಾಯ ಅಭಿವೃದ್ದಿ ಸಂಘ ಮೂಲ್ಕಿ ಇದರ ಅಧ್ಯಕ್ಷೆ ವತ್ಸಲ ಬಂಗೇರ,ಡಾ.ಎಲ್.ಎಲ್.ಜೋಷುವಾ ಮತ್ತಿತರರು ಉಪಸ್ಥಿತರಿದ್ದರು.
ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಮಾಹಿತಿ ಮತ್ತು ಸಂಪರ್ಕ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಸ್ವಾಗತಿಸಿದರು.ಪ.ಪಂ. ಮುಖ್ಯಾಧಿಕಾರಿ ವಾಣಿ ಆಳ್ವ ವಂದಿಸಿದರು. ಮುಕ್ಕ ಆಸ್ಪತ್ರೆಯ ಸಂಯೋಜಕರಾದ ಫ್ರೊ. ಶ್ರೀರಾಮ ಕಾರಂತ ಕಾರ‍್ಯಕ್ರಮ ನಿರೂಪಿಸಿದರು.

Kinnigoli-07081407

Puneethakrishna

Comments

comments

Comments are closed.

Read previous post:
Kinnigoli-07081406
ರಿಕ್ಷಾ ಚಾಲಕ ಮಾಲಕ- ಅಶೋಕ್ ಚಿತ್ರಾಪು ಆಯ್ಕೆ

ಮೂಲ್ಕಿ: ಮೂಲ್ಕಿ ಅಟೊ ರಿಕ್ಷಾ ಚಾಲಕ ಮಾಲಕರ ಸಂಘದ 2014-15ನೇ ಸಾಲಿನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಚಿತ್ರಾಪು ಆಯ್ಕೆಯಾಗಿದ್ದಾರೆ ಗೌರವ ಅಧ್ಯಕ್ಷರಾಗಿ ವಕೀಲರಾದ ಬಿಪಿನ್ ಪ್ರಸಾದ್ ಮತ್ತು...

Close