ದೇಶದ ಸವಿಂಧಾನ ಹಾಗೂ ನಡವಳಿ ಬಗ್ಗೆ ಅರಿವು ಮೂಡಿಸಿ

ಮೂಲ್ಕಿ: ಶಾಲಾ ಸಂಸತ್ತಿನಲ್ಲಿ ಭಾಗವಹಿಸಿವ ಮೂಲಕ ದೇಶದ ಸವಿಂಧಾನ ಪದ್ದತಿ ಹಾಗೂ ನಡವಳಿಕೆಯ ಬಗ್ಗೆ ಅರಿವು ಮೂಡಿಸಿಕೊಂಡು ಜನಪ್ರಿನಿಧಿಯಾಗಿ ಅಥವಾ ಉತ್ತಮ ಜನಪ್ರತಿನಿಧಿಯಾಗಿ ಆಯ್ಕೆಯನ್ನು ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕಾರಣರಾಗಬಹುದು ಎಂದು ಮಾಜಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮೂಲ್ಕಿ ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಸತ್ತು ಹಾಗೂ ಅಧ್ಯಕ್ಷರು ಮತ್ತು ಮಂತ್ರಿಮಂಡಲದ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಆರ್ಥಿಕ ಬಡವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಆಂಗ್ಲ ಶಿಕ್ಷಣ ದೊರಕಬೇಕೆಂಬ ದ್ಯೇಯೋದ್ದೇಶದಿಂದ ದಿ.ರುಕ್ಕರಾಮ ಸಾಲ್ಯಾನ್ ಪ್ರಾರಂಭಿಸಿದ ಕಾಲೇಜು ಉತ್ತಮ ಶಿಕ್ಷಣ ನೀಡುವ ಮೂಲಕ ಪ್ರಸಿದ್ದಿ ಪಡೆದಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ವಿದ್ಯಾರ್ಥಿ ಸಂಸತ್ತು ಸದಸ್ಯರಿಗೆ ಕಾಲೇಜು ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ ಪ್ರಮಾಣವಚನ ಭೋದಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಸಂಚಾಲಕ ಹರಿಶ್ವಂದ್ರ ವಿ. ಕೋಟ್ಯಾನ್ ವಹಿಸಿದ್ದರು. ಅತಿಥಿಗಳಾಗಿ ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ.ಸಾಲ್ಯಾನ್,ಸದಾಶಿವ ಸಾಲ್ಯಾನ್ ಪೈಯೊಟ್ಟು, ಬಾಲಚಂದ್ರ ಸನಿಲ್,ರಾಘು ಸುವರ್ಣ,ಯದೀಶ್ ಅಮೀನ್,ಪ್ರಮೋದ್ ಕುಮಾರ್,ವಾಸು ಪೂಜಾರಿ,ಭಾಗ್ಯವಾನ್ ಸನಿಲ್, ಯೋಗೀಶ್ ಕೋಟ್ಯಾನ್,ವೇದವ್ಯಾಸ ,ಪ್ರಾಂಶುಪಾಲೆ ಶಶಿಲೇಖ,ಮುಖ್ಯೋಪಾದ್ಯಾಯಿನಿ ಯಶೋಧಾ ಸಾಲ್ಯಾನ್, ವಿದ್ಯಾರ್ಥಿ ನಾಯಕರಾದ ರಜತ್ ಮತ್ತು ಆದಿತ್ಯ ಮಂತ್ರಿಗಳಾದ ರಾಹುಲ್,ಬಸ್ರಿಯಾ,ನಿಹಿಲ,ರಕ್ಷಾ,ಜಸ್ಮಿತಾ ವಿ ಪೂಜಾರಿ,ಸ್ಪರ್ಷಾ ಅಮೀನ್,ಅಕ್ಷಯ್ ಎಸ್,ರಾಝೀಕ್,ರೋಹಿತ್ ಭಂಡಾರಿ,ರಿಹಾಬ್,ಸೀಝುರ್,ಶಿಫಾ ಶೇಖ್,ರಿಹಾನ್,ಅಶ್ವಿನ್,ರಾಧಾ ಕೃಷ್ಣ,ಪ್ರತಿಷ್ಷಾ ಅಮೀನ್,ನಿತಿಶ್ ಪಂಡಿತ್,ಚೆಲ್ಸಾ ಉಪಸ್ಥಿತರಿದ್ದರು.
ಲಿಖಿತ್ ಸ್ವಾಗತಿಸಿದರು,ತನಿಷಾ ನಿರೂಪಿಸಿದರು,ಆಶ್ರೀಯಾ ವಂದಿಸಿದರು.

Kinnigoli 07081403

Bhagyavan Sanil

Comments

comments

Comments are closed.

Read previous post:
Kinnigoli 07081404
ಶಾಲಾ ವಿದ್ಯಾರ್ಥಿ ಸಂಘಗಳ ಪದಗ್ರಹಣ

ಮೂಲ್ಕಿ: ಆಧುನಿಕ ಜಗತ್ತಿನ ವ್ಯವಹಾರಿಕ ಕ್ಷೇತ್ರದ ಸವಾಲುಗಳನ್ನು ಪರಿಣಾಮ ಕಾರಿಯಾಗಿ ನಿರ್ವಹಿಸಲುವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಪೂರ್ವ ತಯಾರಿ ಪ್ರಾರಂಭಿಸುವ ಅಗತ್ಯ ವಿದೆ ಎಂದು ದುಬೈ ನಿವ್ ಮೆಡಿಕಲ್...

Close