ಶಾಲಾ ವಿದ್ಯಾರ್ಥಿ ಸಂಘಗಳ ಪದಗ್ರಹಣ

ಮೂಲ್ಕಿ: ಆಧುನಿಕ ಜಗತ್ತಿನ ವ್ಯವಹಾರಿಕ ಕ್ಷೇತ್ರದ ಸವಾಲುಗಳನ್ನು ಪರಿಣಾಮ ಕಾರಿಯಾಗಿ ನಿರ್ವಹಿಸಲುವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಪೂರ್ವ ತಯಾರಿ ಪ್ರಾರಂಭಿಸುವ ಅಗತ್ಯ ವಿದೆ ಎಂದು ದುಬೈ ನಿವ್ ಮೆಡಿಕಲ್ ಸೆಂಟರ್ ಇದರ ಅಧ್ಯಕ್ಷ ಕೆ. ಉಮೇಶ್ ಭಂಡಾರಿ ಹೇಳಿದರು
ಕಿಲ್ಪಾಡಿ ಶ್ರೀ ವ್ಯಾಸಮಹರ್ಷಿ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ವಿದ್ಯಾರ್ಥಿ ಸಂಘಗಳ ಪದಗ್ರಹಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಪ್ರತಿಕೆಗಳನ್ನು ಮತ್ತು ನಿಯತಕಾಲಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ಬರೆಯುವ ಹವ್ಯಾಸ ರೂಪಿಸಿಕೊಳ್ಳಬೇಕು ಪ್ರಾಪಂಚಿಕ ವಿದ್ಯಮಾನಗಳು ವಿದ್ಯಾರ್ಥಿಗಳ ಆಸಕ್ತಿಯ ವಿಷಯವಾಗಿ ಮೂಡಿಬರಬೇಕು ಶಾಲೆಯ ಕಾರ್ಯಕ್ರಮಗಳನ್ನು ಸಂಘಟಿಸಿ ಉತ್ತಮ ಸಂಘಟಕರಾಗಿ ಮೂಡಿಬಂದರೆ ಮುಂದಿನ ಜೀವನದಲ್ಲಿ ಬರುವ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂದರು.ಈ ಸಂದರ್ಭ ಶಾಲಾ ವಿದ್ಯಾರ್ಥಿ ನಾಯಕ ಅಖಿಲೇಶ್ ಶೆಣೈ ಮತ್ತು ತಂಡವನ್ನು ಪದಗ್ರಹಣ ಗೊಳಿಸಲಾಯಿತು. ಅದ್ಯಾಪಕಿ ಕಾಮಾಕ್ಷಿ ನಾಯಕ್ ಪ್ರಾಮಾಣ ವಚನ ಓದಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಜಿ.ಜಿ.ಕಾಮತ್ ವಹಿಸಿದ್ದರು. ಅತಿಥಿಗಳಾಗಿ ವ್ಯಾಸ ಮಹರ್ಷಿ ವಿದ್ಯಾಫೀಠದ ಕಾರ್ಯದರ್ಶಿ ಕೆ.ನರಸಿಂಹ ಪೈ, ಉಪಾಧ್ಯಕ್ಷ ಪ್ರೊ.ನಾಗೇಶ್ ಶೆಣೈ,ಮುಖ್ಯ ಶಿಕ್ಷಕಿ ಚಂದ್ರಿಕಾ ಭಂಡಾರಿ ಉಪಸ್ಥಿತರಿದ್ದರು.
ಚಂದ್ರಿಕಾ ಭಂಡಾರಿ ಸ್ವಾಗತಿಸಿದರು. ದೇವಿಕಾ ನಿರೂಪಿಸಿದರು.ಶ್ರೀಲಕ್ಷ್ಮಿ ಕಾಮತ್ ವಂದಿಸಿದರು.

Kinnigoli 07081404

Bhagyavan Sanil

 

Comments

comments

Comments are closed.

Read previous post:
Kinnigoli 07081402
ಹೋಬಳಿ ಪ್ರೌಢ ಶಾಲಾ ತ್ರೋಬಾಲ್ ಪಂದ್ಯಾಕೂಟ

ಮೂಲ್ಕಿ: ಕ್ರೀಡೆ ಶೈಕ್ಷಣಿಕ ಜೀವನದ ಅವಿಭಾಜ್ಯ ಅಂಗವಾಗಿದ್ದು ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನದೊಂದಿಗೆ ಗೆಲುವಿನ ಗುರಿಸಾಧಿಸಬೇಕು ಎಂದು ಸಿ.ಎಸ್.ಐ ಯುನಿಟಿ ಚರ್ಚು ಸಭಾಪಾಲಕರಾದ ರೆ. ಸಂತೋಷ್ ಕುಮಾರ್ ಹೇಳಿದರು....

Close