ಹೋಬಳಿ ಪ್ರೌಢ ಶಾಲಾ ತ್ರೋಬಾಲ್ ಪಂದ್ಯಾಕೂಟ

ಮೂಲ್ಕಿ: ಕ್ರೀಡೆ ಶೈಕ್ಷಣಿಕ ಜೀವನದ ಅವಿಭಾಜ್ಯ ಅಂಗವಾಗಿದ್ದು ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನದೊಂದಿಗೆ ಗೆಲುವಿನ ಗುರಿಸಾಧಿಸಬೇಕು ಎಂದು ಸಿ.ಎಸ್.ಐ ಯುನಿಟಿ ಚರ್ಚು ಸಭಾಪಾಲಕರಾದ ರೆ. ಸಂತೋಷ್ ಕುಮಾರ್ ಹೇಳಿದರು.
ದ.ಕ ಜಿಲ್ಲಾ ಪಂಚಾಯತಿ ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ವಲಯದ ವತಿಯಿಂದ ಕಾರ್ನಾಡು ಸಿ.ಎಸ್.ಐ ಮತ್ತು ಯುಬಿಯಂಸಿ ಶಾಲೆಯ ಸಂಯೋಜನೆಯಲ್ಲಿ ಸೋಮವಾರ ಗಾಂಧಿ ಮೈದಾನದಲ್ಲಿ ನಡೆದ ಹೋಬಳಿ ಮಟ್ಟದ ಪ್ರೌಢ ಶಾಲಾ ತ್ರೋಬಾಲ್ ಪಂದ್ಯಾಕೂಟ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಪೂಲ್ಕಿಯ ಪ್ರಥಮ ಪ್ರಜೆ ಮೀನಾಕ್ಷಿ ಬಂಗೇರಾ ಮಾತನಾಡಿ,ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರಿಸುವುದರಿಂದ ಏಕಾಗ್ರತೆ ಮತ್ತು ಆರೋಗ್ಯ ಲಭ್ಯವಾಗುತ್ತದೆ ಕ್ರೀಡೆಯಿಂದ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರೆ.ಸಂತೋಷ್ ಕುಮಾರ್ ವಹಿಸಿದ್ದರು.
ಅತಿಥಿಗಳಾಗಿ ಮೂಲ್ಕಿ ನಪಂ.ಮುಖ್ಯಾಧಿಕಾರಿ ವಾಣಿ ಆಳ್ವಾ,ಮೂಲ್ಕಿ ರೋಟರಿ ಅಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ ಸಂಚಾಲಕ ಪ್ರೊ.ಸ್ಯಾಮ್ ಮಾಬೆನ್,ಸಿ.ಎಸ್.ಐ ಶಾಲೆಯ ಮುಖ್ಯಾಪಾದ್ಯಾಯಿನಿ ಎಲಿಜಬೆತ್ ಪುಷ್ಪಲತಾ,ಯುಬಿಎಂಸಿ ಶಾಲೆಯ ಮುಖ್ಯ ಶಿಕ್ಷಕಿ ಐರಿನ್ ಶಶಿಕಲಾ ವೇದಿಕೆಯಲ್ಲಿದ್ದರು. ಎಲಿಜಬೆತ್ ಪುಷ್ಪಲತಾ ಸ್ವಾಗತಿಸಿದರು. ನಿರ್ಮಲ ನಿರೂಪಿಸಿದರು.ಉಮಾವತಿ ವಂದಿಸಿದರು.

Kinnigoli 07081402

Bhagevan Sanil

Comments

comments

Comments are closed.

Read previous post:
Kinnigoli 07081401
ಎನ್ ಸಿ ಸಿ ವಿದ್ಯಾರ್ಥಿಗಳಿಂದ ಕಾಲ್ನಡಿಗೆ

ಕಿನ್ನಿಗೋಳಿ: ಪೋಂಪೈ ಕಾಲೇಜು ಐಕಳ ಎನ್ ಸಿ ಸಿ ನೌಕಾದಳದ ವಿದ್ಯಾರ್ಥಿಗಳಿಂದ ಆರೋಗ್ಯಕ್ಕಾಗಿ ಕಾಲ್ನಡಿಗೆ ಕಾರ‍್ಯಕ್ರಮವು ಇತ್ತೀಚೆಗೆ ಜರಗಿತು. ವಿದ್ಯಾರ್ಥಿಗಳಲ್ಲಿ ಆರೋಗ್ಯ ಕಾಳಜಿ, ಪರಿಸರ ಪ್ರೇಮ, ಸಾಹಸ...

Close