ಬಸ್ಸು ತಂಗುದಾಣ ಉದ್ಘಾಟನಾ ಸಮಾರಂಭ

ಮೂಲ್ಕಿ: ಗೆಳೆಯರ ಬಳಗ ಮತ್ತು ವೃಂದಾವನ ನಗರ ನಿವಾಸಿಗಳು ಹೊಸಬೆಟ್ಟು ಇವರ ಅಶ್ರಯದಲ್ಲಿ ಶ್ರೀ ಗುರು ರಾಘವೇಂದ್ರ ಮಠ ಈ ನೂತನ ಬಸ್ಸು ತಂಗುದಾಣವನ್ನು ಸ್ಥಳೀಯ ಪಾಲಿಕೆ ಸದಸ್ಯರಾದ ಪ್ರತಿಭಾ ಕುಳಾಯಿ ಉದ್ಘಾಟಿಸಿದರು. ಮಂಗಳೂರು ಉತ್ತರ ಕ್ಷೇತ್ರದ (ಸ್ಥಳೀಯ) ಶಾಸಕ ಮೊಯಿದ್ದೀನ್ ಬಾವ  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ಯುವ ಜನತೆಯ ಪಾತ್ರ ಈ ಬಗ್ಗೆ ಮಾತನಾಡಿದರು ಹಾಗೂ ಈ ಬಗ್ಗೆ ಗೆಳೆಯರ ಬಳಗ ಹಮ್ಮಿಕೊಂಡಂತಹ ಕಾರ್ಯ ಶ್ಲಾಘನೀಯ. ಅಧ್ಯಕ್ಷತೆಯನ್ನು ಶ್ರೀನಿವಾಸ್ ಅಧೀಕ್ಷಕ ಇಂಜಿನಿಯರ್ ನವ ಮಂಗಳೂರು ಬಂದರು ಮಂಡಳಿ ಪಣಂಬೂರು ಇವರು ವಹಿಸಿದ್ದರು. ಗೌರವ ಅತಿಥಿಗಳಾಗಿ ವಾದೀಶ್ ಆಚಾರ್, ಪುಷ್ಪರಾಜ್ ಶೆಟ್ಟಿ, ದಯಾನಂದ ಮತ್ತು ಗೆಳೆಯರ ಬಳಗದ ಅಧ್ಯಕ್ಷ ಕೃಷ್ಣ ಐತಾಳ್ ಉಪಸ್ಥಿತರಿದ್ದರು.

ಶಾಸಕರನ್ನು ಮತ್ತು ಪಾಲಿಕೆ ಸದಸ್ಯರನ್ನು ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಸೌಜನ್ಯ ಪ್ರಾರ್ಥನೆಗೈದರು. ಗೆಳೆಯರ ಬಳಗದ ಕಾರ್ಯದರ್ಶಿ  ಅರುಣ್ ಪ್ರದೀಪ್ ಡಿಸೋಜ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಗೆಳೆಯರ ಬಳಗದ ಸದಸ್ಯ ಮನೋಜ್  ವಂದಿಸಿದರು. ಗೆಳೆಯರ ಬಳಗ ಸದಸ್ಯರಾದ ಅನಿಲ್, ಪಿಯುಸ್, ವಿನಯ, ಸಂತೋಷ್, ವಸಂತ, ಹೇಮಚಂದ್ರ, ನರೇಶ್ ಮತ್ತು ಐವನ್  ಸಹಕರಿಸಿದರು.

Kinnigoli-09081401

Mithuna Kodethuru

Comments

comments

Comments are closed.

Read previous post:
Kinnigoli-07081407
ಪರಿಸರ ಶುಚಿಯಾಗಿಡಲು ಸಾರ್ವಜನಿಕರ ಸಹಭಾಗಿತ್ವ ಮುಖ್ಯ

ಮೂಲ್ಕಿ: ಪರಿಸರವನ್ನು ತ್ಯಾಜ್ಯ ಮುಕ್ತವನ್ನಾಗಿಸುವುದೇ ಅಲ್ಲದೆ ಶುಚಿಯಾಗಿಡುವುದರಿಂದ ರೋಗಗಳನ್ನು ತಡೆಗಟ್ಟಬಹುದು ಇದಕ್ಕೆ ಸಾರ್ವಜನಿಕ ಸಹಭಾಗಿತ್ವ ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಚ್.ಎಸ್.ಶಿವಕುಮಾರ್...

Close