ಹೆಚ್ಚಿನ ಬಲವರ್ಧನೆ ಸಂಘಟನೆಯಿಂದ ಮಾತ್ರ ಸಾದ್ಯ

ಮೂಲ್ಕಿ: ಪರಿಸರ ಸಂರಕ್ಷಣೆಯ ಧ್ಯೇಯ ವಾಕ್ಯದೊಂದಿಗೆ ಒಗ್ಗಟ್ಟಿನಲ್ಲಿದ್ದುಕೊಂಡು ಸಂಘಟನೆಯನ್ನು ಬಲಪಡಿಸಿದರೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬಹುದು ಎಂದು ಮಂಗಳೂರಿನ ಮೇಯರ್ ಮಹಾಬಲ ಮಾರ್ಲ ಹೇಳಿದರು.ಅವರು ಕರಾವಳಿ ಚಿಕನ್ ಟ್ರೇಡರ‍್ಸ್ ಎಸೋಸಿಯೇಶನ್(ರಿ) ಇದರ ಎರಡನೇ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

 ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಮಹಾಬಲ ಮಾರ್ಲ ಅವರನ್ನು ಎಸೋಸಿಯೇಶನ್ ಪರವಾಗಿ ಸನ್ಮಾನಿಸಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮ.ನ.ಪಾ.ಸುರತ್ಕಲ್ ವಲಯ ಪರಿಸರ ಅಭಿಯಂತರಾದ ಮನು, ಮ.ನ.ಪಾ ಮಂಗಳೂರಿನ ಪರಿಸರ ಅಭಿಯಂತರ ಮಂಜುನಾಥ ಆರ್ ಶೆಟ್ಟಿ,ಮ.ನ.ಪಾ. ಉಪಕಛೇರಿ ಸುರತ್ಕಲಿನ ಆರೋಗ್ಯ ಅಧಿಕಾರಿ ಬಸವರಾಜ್ , ಕರಾವಳಿ ಚಿಕನ್ ಟ್ರೇಡರ‍್ಸ್ ಎಸೋಸಿಯೇಶನ್‌ನ ಅಧ್ಯಕ್ಷರಾದ ಹಸನ್ ಶೆರೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುರಂಧರ ಹಳೆಯಂಗಡಿ ಸ್ವಾಗತಿಸಿದರು, ಬಷೀರ್ ಅಹಮದ್ ಹಳೆಯಂಗಡಿ ಧನ್ಯವಾದ ಅರ್ಪಿಸಿದರು. ಪ್ರಕಾಶ ಆಚಾರ್ ಕಿನ್ನಿಗೋಳಿ ಕಾರ‍್ಯಕ್ರಮ ನಿರೂಪಿಸಿದರು.

Kinnigoli-09081404

Comments

comments

Comments are closed.

Read previous post:
Kinnigoli-09081403
ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಚೆಕ್‌ ವಿತರಣೆ

ಕಿನ್ನಿಗೋಳಿ: ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಮೆನ್ನಬೆಟ್ಟು ಗ್ರಾ. ಪಂ. ಕಟೀಲು ಸುರೇಖಾ ಬಿ. ಎನ್ ಮಂಜೂರಾದ ಚೆಕ್‌ನ್ನು ಕಿನ್ನಿಗೋಳಿ ಗ್ರಾಮ ಪಂಚಾಯತ್‌ನಲ್ಲಿ ಸಚಿವ ಅಭಯಚಂದ್ರ ಜೈನ್‌ರವರು...

Close