ಕುಡಿಯುವ ನೀರು ಹಾಗೂ ಒಳಚರಂಡಿ ಬೃಹತ್ ಯೋಜನೆ

ಮೂಲ್ಕಿ: ರಾಜ್ಯದ ಆಯ್ದ 14 ನಗರ ಪಂಚಾಯಿತಿಗಳಿಗೆ ಕರ್ನಾಟಕ ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ವಿಭಾಗದಿಂದ ಒಳಚರಂಡಿ ಹಾಗೂ ಕುಡಿಯುವ ನೀರು ಯೋಜನೆಯ ಕಾರ್ಯವ್ಯಾಪ್ತಿಯಲ್ಲಿದ್ದಂತೆ ಮೂಲ್ಕಿ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆ ವಾರ ಪೂರ್ತಿ ಕುಡಿಯುವ ನೀರು ಸರಬರಾಜು ಹಾಗೂ ಸೂಕ್ತ ರೀತಿಯ ಒಳಚರಂಡಿ ಯೋಜನೆಗಾಗಿ ಒಟ್ಟು 21.23 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಯೋಜನೆಯನ್ನು ರೂಪಿಸಲಾಗಿದೆ, ಈ ಬಗ್ಗೆ ಮೂಲ್ಕಿಯ ಜನಪ್ರತಿನಿಧಿಗಳು ಸೂಕ್ತ ಮಾರ್ಗದರ್ಶನವನ್ನು ನೀಡಿ ಯೋಜನೆ ಜಾರಿಗೊಳಿಸುವಲ್ಲಿ ಸಹಕರಿಸಬೇಕು ಎಂದು ಯೋಜನೆಯ ಹಣಕಾಸು ವಿಭಾಗದ ಮಹಾಪ್ರಬಂಧಕ ಕೆ.ಎಂ.ರಮೇಶ್ ಹೇಳಿದರು.

ಮೂಲ್ಕಿ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಯೋಜನೆಯ ಚಿತ್ರಣವನ್ನು ಸ್ಲೈಡ್ ಶೋ ಮೂಲಕ ಮಾಹಿತಿ ನೀಡಿದರು.
ರಾಜ್ಯದ 14 ಪಟ್ಟಣ ಪಂಚಾಯಿತಿಯಲ್ಲಿ ಆರು ಕಡೆಗಳಲ್ಲಿ (ಮೂಲ್ಕಿ, ಗಜೇಂದ್ರ ಗಡ, ನರೇಗಲ್ಲು, ಮುಂಡರಗಿ, ಬಂಕಾಪುರ, ಹಳ್ನಾವರ) ಈ ಯೋಜನೆಯನ್ನು ಜಾರಿ ಮಾಡುವ ಜವಬ್ದಾರಿಯನ್ನು ವಹಿಸಿಕೊಂಡಿರುವ ಓಯನ್ಸ್ ಸೊಲ್ಲೂಷನ್ಸ್ ಪೈ ಲಿಮಿಟೆಡ್ ಸಂಸ್ಥೆಯು ಕುಡಿಯುವ ನೀರಿಗಾಗಿ 7.32 ಕೋಟಿ ರೂ. ಹಾಗೂ ಒಳಚರಂಡಿ ಯೋಜನೆಗಾಗಿ 13.91 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಆಗಲಿದೆ, ಇದರಲ್ಲಿ ಸರ್ಕಾರದ ಪಾಲು ಬಂಡವಾಳ ಶೇ.50. ಪಟ್ಟಣ ಪಂಚಾಯಿತಿಗೆ ನೀಡುವ ಎಸ್‌ಎಫ್‌ಸಿಯಲ್ಲಿ ಶೇ.30, ಉಳಿದ ಶೇ.20ನ್ನು ಸಾಲದ ರೂಪದಲ್ಲಿ ಹಣವನ್ನು ಪಡೆಯಲಾಗುವುದು ಯೋಜನೆ ನಿರ್ಮಾಣವಾದ ನಂತರ ಅದರ ನಿರ್ವಹಣೆಯನ್ನು ಕಂಪೆನಿಯೇ ವಹಿಸಲಿದೆ ಎಂದರು.
ಪಟ್ಟಣ ಪಂಚಾಯಿತಿಯ ಜಿಲ್ಲಾ ಯೋಜನಾ ನಿರ್ದೇಶಕ ತಾಕತ್ ರಾವ್ ಮಾಹಿತಿ ನೀಡಿ ಸೆಪ್ಟಂಬರ್‌ನಲ್ಲಿ ಯೋಜನೆಗೆ ಟೆಂಡರ್ ಕರೆಯಲಾಗುವುದು, 18 ತಿಂಗಳಲ್ಲಿ ಕಾಮಗಾರಿಯನ್ನು ಮುಗಿಸಿ ಮುಂದಿನ 2016ರ ಡಿಸೆಂಬರ್‌ನಲ್ಲಿ ಯೋಜನೆಯು ಕಾರ್ಯರೂಪಕ್ಕೆ ಬರಲಿದೆ. ಯೋಜನೆಯಲ್ಲಿ ವಿವಿಧ ಕಡೆಗಳಲ್ಲಿ ಓವರ್ ಹೆಡ್ ಟಾಂಕಿಗಳು, ಅಗತ್ಯವಿರುವಲ್ಲಿ ಕೊಳವೆವೆಲ್ ಅಥವ ತೆರೆದ ಬಾವಿ, ತುಂಬೆಯಿಂದಲೂ ಸಂಪರ್ಕ ಪಡೆದು ಕೊಳ್ಳಲಾಗುವುದು. ಟೆಂಡರ್‌ನ ಘೋಷಣೆ ಆಗುವ ಮೊದಲು ಕಾಮಗಾರಿಗಳಿಗೆ ಸಲಹೆಗಳನ್ನು ನೀಡುವ ಪಂಚಾಯಿತಿ ಸದಸ್ಯರಿಗೆ ಅವಕಾಶ ಇದೆ, ಯೋಜನೆ ಜಾರಿ ಆದ ಮೇಲೆ ನೀರಿನ ದರ ವಸೂಲಿಯನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.
ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಉಪಾಧ್ಯಕ್ಷೆ ಸವಿತಾ ಭಂಡಾರ್ತಿ, ಇಂಜಿನಿಯರ್ ಪದ್ಮನಾಭ, ಮುಖ್ಯಾಧಿಕಾರಿ, ಅಧಿಕಾರಿಗಳು, ಸದಸ್ಯರು ಹಾಜರಿದ್ದರು.

OLYMPUS DIGITAL CAMERA

Narendra Kerekadu

Comments

comments

Comments are closed.

Read previous post:
Kinnigoli-09081401
ಬಸ್ಸು ತಂಗುದಾಣ ಉದ್ಘಾಟನಾ ಸಮಾರಂಭ

ಮೂಲ್ಕಿ: ಗೆಳೆಯರ ಬಳಗ ಮತ್ತು ವೃಂದಾವನ ನಗರ ನಿವಾಸಿಗಳು ಹೊಸಬೆಟ್ಟು ಇವರ ಅಶ್ರಯದಲ್ಲಿ ಶ್ರೀ ಗುರು ರಾಘವೇಂದ್ರ ಮಠ ಈ ನೂತನ ಬಸ್ಸು ತಂಗುದಾಣವನ್ನು ಸ್ಥಳೀಯ ಪಾಲಿಕೆ ಸದಸ್ಯರಾದ...

Close