ರಕ್ತದಾನದಿಂದ ಎಷ್ಟೋ ಜೀವಗಳು ಬೆಳಕು ಕಾಣಲಿವೆ

ಕಿನ್ನಿಗೋಳಿ: ಆರೋಗ್ಯವಂತ ಗುಣಲಕ್ಷಣಗಳ ದೇಹಪ್ರಕೃತಿ ಹೊಂದಿರುವವರು ಮಾತ್ರ ರಕ್ತದಾನ ಮಾಡಲು ಸಾಧ್ಯ. ಬೆಲೆಕಟ್ಟಲಾಗದ ರಕ್ತದಿಂದ ಸಾವಿನಂಚಿನಲ್ಲಿರುವ ಎಷ್ಟೋ ಜೀವಗಳು ಬೆಳಕು ಕಾಣಲಿವೆ ಎಂದು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ತೆಲಿನೊ ಹೇಳಿದರು.
ಐಕಳ ಪೊಂಪೈ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ, ಯೂತ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ವಿದ್ಯಾರ್ಥಿ ಕ್ಷೇಮಾಪಾಲನಾ ಘಟಕ ಪೊಂಪೈ ಕಾಲೇಜು, ಐಕಳ ಗ್ರಾಮ ಪಂಚಾಯಿತಿ , ರೋಟರಿ ಕ್ಲಬ್ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಮುಚ್ಚೂರು-ನೀರುಡೆ, ಜೆ.ಸಿ.ಐ. ಮುಂಡ್ಕೂರು ಭಾರ್ಗವ, ಕೊನ್ಸಟ್ಟಾ ಆಸ್ಪತ್ರೆ ಕಿನ್ನಿಗೋಳಿ, ರಿಕ್ಷಾ ಚಾಲಕ- ಮಾಲಕರ ಸಂಘ ಕಿನ್ನಿಗೋಳಿ, ಭಾರತೀಯ ಕಥೋಲಿಕ್ ಯುವ ಸಂಚಾಲನ ಕಿನ್ನಿಗೋಳಿ ವಲಯದ ಜಂಟೀ ಆಶ್ರಯದಲ್ಲಿ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ‍್ಸ್ ಆಸ್ಪತ್ರೆಯ ರಕ್ತ ನಿಧಿ ಘಟಕದ ಸಹಭಾಗಿತ್ವದಲ್ಲಿ ಶನಿವಾರ ಐಕಳ ಪೊಂಪೈ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್-ಕಾಲೇಜು ಮಟ್ಟದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪೊಂಪೈ ಕಾಲೇಜಿನ ಸಂಚಾಲಕ ರೆ.ಫಾ. ಪಾವ್ಲ್ ಪಿಂಟೊ ಆಶೀರ್ವಚನಗೈದರು. ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಅಧ್ಯಕ್ಷತೆ ವಹಿಸಿದರು.
100 ಮಂದಿ ರಕ್ತದಾನ ಮಾಡಿ ಸಹಕರಿಸಿದರು. ಮಂಗಳೂರು ರಾ.ಸೇ.ಯೋ ವಿಶ್ವವಿದ್ಯಾನಿಲಯ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೋ. ವಿನೀತ ಕೆ, ಮಂಗಳೂರು ಕಂಕನಾಡಿ ಫಾದರ್ ಮುಲ್ಲರ‍್ಸ್ ಆಸ್ಪತ್ರೆ ಡಾ. ಚಾರು, ಕಿನ್ನಿಗೋಳಿ ಕೊನ್ಸೆಟ್ಟಾ ಆಸ್ಪತ್ರೆ ನಿರ್ದೇಶಕಿ ಭಗಿನಿ ಡಾ. ಜೀವಿತಾ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಬರ್ಟನ್ ಸಿಕ್ವೇರಾ, ಕಿನ್ನಿಗೋಳಿ ರಿಕ್ಷಾ ಚಾಲಕ ಮಾಲಕರ ಸಂಘ ಅಧ್ಯಕ್ಷ ಪ್ರವೀಣ್ ಪೂಜಾರಿ, ಭಾರತೀಯ ಕಥೋಲಿಕ್ ಯುವ ಸಂಚಾಲನ ಕಿನ್ನಿಗೋಳಿ ವಲಯ ಅಧ್ಯಕ್ಷ ಕ್ವಿನ್‌ಸ್ಟನ್ ಡಿ,ಸೋಜ, ಮುಚ್ಚೂರು-ನೀರುಡೆ ಲಯನ್ಸ್ ಅಧ್ಯಕ್ಷ ಓಸ್ವಲ್ಡ್ ಡಿ,ಸೋಜ, ವಲಏರಿಯನ್ ಸಿಕ್ವೇರಾ, ಜೆ.ಸಿ.ಐ ಮುಂಡ್ಕೂರು ಭಾರ್ಗವ ಅಧ್ಯಕ್ಷ ವೆಂಕಟೇಶ್ ಎಸ್. ಪೂಜಾರಿ, ಯೋಗೀಶ್ ಕೋಟ್ಯಾನ್, ಐಕಳ ಪೊಂಪೈ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಜನಧಿಕಾರಿಗಳಾದ ಪ್ರೊ. ಗುಣಕರ್, ಪ್ರೊ. ಯೋಗೇಂದ್ರ, ಮತ್ತಿತರರು ಉಪಸ್ಥಿತರಿದ್ದರು.

kinnigoli 09081405 kinnigoli 09081406

 

Comments

comments

Comments are closed.

Read previous post:
kinnigoli 09081403
ಮೂಲ್ಕಿ: ಶ್ರೀ ವರಮಹಾಲಕ್ಷ್ಮಿ ಪೂಜೆ

ಮೂಲ್ಕಿ: ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶ್ರೀಕೃಷ್ಣ ಶಾಂತಿಯವರ ಪೌರೋಹಿತ್ಯದಲ್ಲಿ ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆಯು ಜರುಗಿತು.  

Close