ಎಳವೆಯಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು

ಕಿನ್ನಿಗೋಳಿ: ವ್ಯಕ್ತಿತ್ವ ವಿಕಸನ ನಾಯಕತ್ವ ಗುಣಗಳು ಬೆಳೆಯಲು ಇಂಟರ‍್ಯಾಕ್ಟ್ ಸಂಸ್ಥೆಗಳು ಸಹಕಾರಿಯಾಗುತ್ತದೆ. ಎಳವೆಯಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಂಡು ಸಮಾಜದ ಅಭ್ಯುದಯಕ್ಕೆ ಶ್ರಮಿಸಬೇಕು ಎಂದು ಇಂಟರ‍್ಯಾಕ್ಟ್ ಜಿಲ್ಲಾ ಸಭಾಪತಿ ಜಗನ್ನಾಥ್ ಕೋಟೆ ಹೇಳಿದರು.
ಶನಿವಾರ ಯುಗಪುರುಷ ಸಭಾಭವನದಲ್ಲಿ ನಡೆದ ಕಿನ್ನಿಗೋಳಿ ರೋಟರಿ ಸಂಸ್ಥೆಯಿಂದ ಪ್ರವರ್ತಿಸಲಾದ 13 ಇಂಟರಾಕ್ಟ್ ಸಂಸ್ಥೆಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ ಅಧ್ಯಕ್ಷತೆ ವಹಿಸಿ ೧೩ ಇಂಟರ‍್ಯಾಕ್ಟ್ ಕ್ಲಬ್‌ಗಳ ನೂತನಅಧ್ಯಕ್ಷ, ಕಾರ್ಯದರ್ಶಿ, ಶಿಕ್ಷಕ ನಿರ್ದೇಶಕರಿಗೆ ಹಾಗೂ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿದರು.
ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮಾನಸ ಎಸ್. ಕರ್ಕೇರಾ, ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ ಚೇತನ್, ಶಿಮಂತೂರು ಶ್ರೀ ಶಾರದಾ ಪ್ರೌಡ ಶಾಲೆಯ ಐಶ್ವರ್ಯ ಸಾಲ್ಯಾನ್, ಬಳ್ಕುಂಜೆ ಸಂತ ಫೌಲರ ಪ್ರೌಢಶಾಲೆಯ ಚಮೀಕ್ಷಾ ಕನ್ನಿಕಾ ಗೌಡ, ಮುಂಡ್ಕೂರು ವಿದ್ಯಾವರ್ಧಕ ಪ್ರೌಢ ಶಾಲೆಯ ಶ್ರೀಶ ದಾಸ್, ತಾಳಿಪಾಡಿ ಪೊಂಪೈ ಪ್ರೌಢ ಶಾಲೆಯ ಆಕಾಶ್, ನಡುಗೋಡು ಸರಕಾರಿ ಪ್ರೌಢಶಾಲೆಯ ಸಂಧ್ಯಾ, ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯ ಧನರಾಜ್, ಸೂರಿಂಜೆ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯ ಜಝೀನಾ, ಮೆರಿವೆಲ್ ಆಂಗ್ಲ ಮಾಧ್ಯಮ ಶಾಲೆಯ ನಿಶ್ಮಿತಾ, ಎಕ್ಕಾರು ಸರಕಾರಿ ಪ್ರೌಢ ಶಾಲೆಯ ಪ್ರತೀಕ್ಷಾ, ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆ ಧನ್ಯಶ್ರೀ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢ ಶಾಲೆಯ ಶ್ರೀಲತಾ ಪದವಿ ನೂತನ ಅಧ್ಯಕ್ಷರಾಗಿ ಪದವಿ ಸ್ವೀಕರಿಸಿದರು.
ಕಳೆದ ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಸರಕಾರಿ ಶಾಲಾ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದ ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಗೀತಾ ನಿಶಾ ಪಿರೇರಾ ಅವರನ್ನು ಪುರಸ್ಕರಿಸಲಾಯಿತು.
ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಇಂಟರ‍್ಯಾಕ್ಟ್ ವಲಯ ಸಂಯೋಜಕ ಬಾಲಕೃಷ್ಣ ಶೆಟ್ಟಿ ಕಳ್ಳಿಗೆ, ವಲಯ ಸೇನಾನಿ ಶರತ್ ಶೆಟ್ಟಿ, ಕಿನ್ನಿಗೋಳಿ ರೋಟರಿ ಕ್ಲಬ್ ಇಂಟರ‍್ಯಾಕ್ಟ್ ಸಭಾಪತಿ ಯಶವಂತ ಐಕಳ, ಕಿನ್ನಿಗೋಳಿ ರೋಟರಿ ಕ್ಲಬ್ ಕಾರ್ಯದರ್ಶಿ ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು. ಹೆರಿಕ್ ಪಾಯಸ್ ಕಾರ್ಯಕ್ರಮ ನಿರೂಪಿಸಿದರು.

kinnigoli 09081407 kinnigoli 09081408 kinnigoli 09081409 kinnigoli 09081410 kinnigoli 09081411 kinnigoli 09081412 kinnigoli 09081413

 

Comments

comments

Comments are closed.

Read previous post:
kinnigoli 09081405
ರಕ್ತದಾನದಿಂದ ಎಷ್ಟೋ ಜೀವಗಳು ಬೆಳಕು ಕಾಣಲಿವೆ

ಕಿನ್ನಿಗೋಳಿ: ಆರೋಗ್ಯವಂತ ಗುಣಲಕ್ಷಣಗಳ ದೇಹಪ್ರಕೃತಿ ಹೊಂದಿರುವವರು ಮಾತ್ರ ರಕ್ತದಾನ ಮಾಡಲು ಸಾಧ್ಯ. ಬೆಲೆಕಟ್ಟಲಾಗದ ರಕ್ತದಿಂದ ಸಾವಿನಂಚಿನಲ್ಲಿರುವ ಎಷ್ಟೋ ಜೀವಗಳು ಬೆಳಕು ಕಾಣಲಿವೆ ಎಂದು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ...

Close