ಚಿರತೆಯ ಸವಾಲು???

ಕಿನ್ನಿಗೋಳಿ: ಪಕ್ಷಿಕೆರೆಯ ಸಮೀಪದ ಕೆಮ್ರಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕಾಡು ಪರಿಸರದಲ್ಲಿ ನಾಲ್ಕು ದಿನಗಳ ಹಿಂದಿನಿಂದ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಸ್ಥಳೀಯ ಮನೆಗಳ ನಾಯಿ ಬೆಕ್ಕುಗಳು ಕಾಣೆಯಾಗುತ್ತಿದ್ದು ಆದರೆ ಎಲ್ಲಿ ಹೋಗಿತ್ತು ಯಕ್ಷ ಪ್ರಶ್ನೆಯಾಗಿ ಉಳಿದಿತ್ತು. ಆದರೆ 4 ದಿನಗಳಿಂದ ಕೆಮ್ರಾಲ್ ಹೊಸಕಾಡು ಪರಿಸರದಲ್ಲಿ ಸಾಯಂಕಾಲ 7 ಗಂಟೆಯ ಸುಮಾರಿಗೆ ಚಿರತೆ ಕೂಗು ಕೇಳಿಸುತಿದ್ದು ನಾಲ್ಕು ದಿನಗಳ ಹಿಂದೆ ಶಶಿ ಸುರೇಶ್ ಅವರ ಮನೆಯ ಮುಂದೆ ಸಾಯಂಕಾಲ ಸುಮಾರು 5 ಗಂಟೆಯ ಹೊತ್ತಿಗೆ ಕಂಡು ಬಂದಿತ್ತು. ಮನೆಯ ನಾಯಿ ಮತ್ತು 2 ಬೆಕ್ಕುಗಳು ಕಾಣೆಯಾಗಿದ್ದು ಚಿರತೆ ತಿಂದಿರುವ ಸಾದ್ಯತೆ ಹೆಚ್ಚಾಗಿದೆ. ಕೂಡಲೇ ಕೆಮ್ರಾಲ್ ಪಂಚಾಯಿತಿ ಆಡಳಿತ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ಕೂಡಲೇ ಕಾರ್ಯ ಪ್ರವರ್ತರಾದ ಅರಣ್ಯ ಇಲಾಖೆ ಸಿಬಂದಿಗಳು ಗುರುವಾರ ಚಿರತೆಯನ್ನು ಹಿಡಿಯಲು ಬೊನು ಇರಿಸಿದ್ದಾರೆ. ಆದರೆ ಬೊನು ಇಟ್ಟು 3 ದಿನವಾದರೂ ಚಿರತೆ ಪತ್ತೆ ಇಲ್ಲ. ಈ ಬಾಗದಲ್ಲಿ ನೂರಾರು ಮನೆಗಳಿದ್ದು ಈಗ ಸ್ಥಳೀಯರು ಭಯ ಬೀತರಾಗಿದ್ದಾರೆ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಪಡುವಂತಾಗಿದೆ. ರಾತ್ರಿಯ ಹೊತ್ತು ಸ್ಥಳೀಯರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ.

Kinnigoli 10081401

Comments

comments

Comments are closed.

Read previous post:
kinnigoli 09081408
ಎಳವೆಯಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು

ಕಿನ್ನಿಗೋಳಿ: ವ್ಯಕ್ತಿತ್ವ ವಿಕಸನ ನಾಯಕತ್ವ ಗುಣಗಳು ಬೆಳೆಯಲು ಇಂಟರ‍್ಯಾಕ್ಟ್ ಸಂಸ್ಥೆಗಳು ಸಹಕಾರಿಯಾಗುತ್ತದೆ. ಎಳವೆಯಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಂಡು ಸಮಾಜದ ಅಭ್ಯುದಯಕ್ಕೆ ಶ್ರಮಿಸಬೇಕು ಎಂದು ಇಂಟರ‍್ಯಾಕ್ಟ್ ಜಿಲ್ಲಾ ಸಭಾಪತಿ ಜಗನ್ನಾಥ್...

Close