ನಾಯಕತ್ವ ತರಬೇತಿ ಶಿಭಿರ

ಮೂಲ್ಕಿ: ಕಾಲೇಜು ವಿದ್ಯಾಬ್ಯಾಸದ ಸಂದರ್ಭ ಸಿಗುವ ತರಬೇತಿ ಮತ್ತು ಸಂಘಟಿತ ಮನೊಭಾವನೆಯಿಂದ ಕಂಡುಕೊಂಡ ನಾಯಕತ್ವದ ಗುಣಗಳಿಂದ ಉತ್ಯಮಶೀಲತೆ ಬೆಳೆಯುತ್ತದೆ ಎಂದು ಉದ್ಯಮಿ ವರುಣ್ ಕೆ.ಶೆಟ್ಟಿ ಹೇಳಿದರು. ಮುಂಬೈ ಫೋರಂ ಆಫ್ ಫ್ರೀ ಎಂಟರ್‌ಪ್ರೈಸಸ್ ಮತ್ತು ಮೂಲ್ಕಿ ವಿಜಯಾ ಕಾಲೇಜು ಸಹಯೋಗದಲ್ಲಿ ಎಂ.ಆರ್.ಪೈ ಫೌಂಡೇಶನ್ ಮುಂಬೈ ಇವರ ಸಂಯೋಜನೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆಯುವ ಎರಡು ದಿನಗಳ ನಾಯಕತ್ವ ತರಬೇತಿ ಶಿಭಿರ ಉದ್ಘಾಟಿಸಿ ಮಾತನಾಡಿದರು.
ವಿಜಯಾ ಕಾಲೇಜಿನಲ್ಲಿ ದೊರಕುವ ಅತ್ಯುತ್ತಮ ಗುಣಮಟ್ಟದ ತರಬೇತಿ ಶಿಭಿರಗಳು ವಿದ್ಯಾರ್ಥಿಗಳನ್ನು ಜೀವನದಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗಿದೆ ಎಂದರು.
ಸಮಾರಂದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಎ.ಆರ್ ಕುಡ್ವಾ ವಹಿಸಿದ್ದರು. ಈ ಸಂದರ್ಭ ಯಶಸ್ವಿ ಯುವ ಉದ್ಯಮಿಯಾಗಿ ಗುರುತಿಸಿಕೊಂಡಿರುವ ವರುಣ್ ಶೆಟ್ಟಿಯವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು.
ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್, ಮುಂಬೈ ಫೋರಂ ಆಫ್ ಫ್ರೀ ಎಂಟರ್‌ಪ್ರೈಸಸ್ ಸಂಪನ್ಮುಲ ವ್ಯಕ್ತಿಗಳಾದ ವಿವೇಕ್ ಪಾಟ್ಕಿ,ಕ್ಲೇರಿಸಾ ಜತ್ತನ್ನ,ಕಾರ್ಯಕ್ರಮ ಸಂಯೋಜಕ ಪ್ರೊ..ಹೆಚ್.ಜಿ.ನಾಗರಾಜ ನಾಯಕ್ ಉಪಸ್ಥಿತರಿದ್ದರು.
ಪ್ರೊ.ಕೆ.ಆರ್.ಶಂಕರ್ ಸ್ವಾಗತಿಸಿದರು, ನಿತಿನ್ ನಿರೂಪಿಸಿದರು. ಪ್ರೊ.ನಾಗರಾಜ ನಾಯಕ್ ವಂದಿಸಿದರು. ಚಿತ್ರ:ಎಂಯುಎಲ್_ ಅಗಷ್ಟು೮_೨ಯುವ ಉದ್ಯಮಿ ವರುಣ್‌ಕೆ. ಶೆಟ್ಟಿಯವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು.

Kinnigoli 10081402

Comments

comments

Comments are closed.

Read previous post:
Kinnigoli 10081401
ಚಿರತೆಯ ಸವಾಲು???

ಕಿನ್ನಿಗೋಳಿ: ಪಕ್ಷಿಕೆರೆಯ ಸಮೀಪದ ಕೆಮ್ರಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕಾಡು ಪರಿಸರದಲ್ಲಿ ನಾಲ್ಕು ದಿನಗಳ ಹಿಂದಿನಿಂದ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಸ್ಥಳೀಯ ಮನೆಗಳ...

Close