ಗ್ರಾಮೀಣ ಕ್ರೀಡೆಗೂ ಆದ್ಯತೆ ನೀಡಿರಿ

ಮೂಲ್ಕಿ: ಶಿಕ್ಷಣ ಹಾಗೂ ಕ್ರೀಡೆಯನ್ನು ಸಮಾನವಾಗಿ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡಲ್ಲಿ, ಆತನ ಭವಿಷ್ಯದ ದಿನಗಳಲ್ಲಿ ಅದು ಸಹಕಾರಿ ಆಗುತ್ತದೆ. ಇಂದು ಕ್ರಿಕೇಟ್‌ಗೆ ಮಾತ್ರ ಮಾನ್ಯತೆ ಸಿಗುತ್ತಿದ್ದು ಹಳ್ಳಿ, ಹಳ್ಳಿಗಳಲ್ಲಿ ನಡೆಸಲ್ಪಡುವ ಕಬಡ್ಡಿಯಂತಹ ಗ್ರಾಮೀಣ ಕ್ರೀಡೆಗೂ ಪ್ರೋತ್ಸಾಹ ನೀಡುವ ಪ್ರಯತ್ನವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದು ಸುರತ್ಕಲ್ ಸಂಚಾರಿ ಠಾಣೆಯ ಪೊಲೀಸ್ ಅಧಿಕಾರಿ ಸುರೇಶ್ ಹೇಳಿದರು.
ಅವರು ಮೂಲ್ಕಿಯ ಮೆಡಲಿನ್ ಪ್ರೌಢಶಾಲೆಯಲ್ಲಿ ಶನಿವಾರ ಹೋಬಳಿ ಮಟ್ಟದ ಫ್ರೌಢಶಾಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣಾಧಿಕಾರಿ ರಘುನಾಥ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶಾಲಾ ಸಂಚಾಲಕ ಆಗ್ನೇಸ್ ಪಿಂಟೊರವರು ಶುಭಹಾರೈಸಿದರು.
ದ.ಕ. ಜಿಲ್ಲಾ ಪಂಚಾಯಿತಿಯ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಮಂಗಳೂರು ಉತ್ತರ ವಲಯ ಹಾಗೂ ಮೆಡಲಿನ್ ಪ್ರೌಢಶಾಲೆ ಮೂಲ್ಕಿ ಜಂಟಿಯಾಗಿ ಪಂದ್ಯಾಟವನ್ನು ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಸಂಯೋಜಿಸಿದ್ದವು.
ಗ್ರೇಸ್ ಮೊನಿಕ್, ಮೆಡಲಿನ್ ಪ್ರೌಢಶಾಲಾ ಮುಖ್ಯಸ್ಥೆ ಪ್ರತಿಮಾ, ವಿದ್ಯಾಪಿಂಟೊ, ಶಿಕ್ಷಕರಾದ ಮಧುಕರ್ ಬಿ ನಾಯ್ಕ್, ಬ್ರಾಯನ್ ಲೋಬೊ, ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Kinnigoli-10081404

Comments

comments

Comments are closed.

Read previous post:
Kinnigoli 10081404
ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

ಮೂಲ್ಕಿ: ಮೂಲ್ಕಿ ಗೇರುಕ್ಕಟೆ ಒಂಬತ್ತು ಮಾಗಣೆ ಮುಂಡಾಲ ಶಿವ ಸಮಾಜ ಕಟ್ಟಡದಲ್ಲಿ ಸಾರ್ವಜನಿಕರಿಗಾಗಿ ಶ್ರೀ ವರಮಹಾಲಕ್ಷ್ಮೀ ಪೂಜೆ ಡಾ.ಸೋಂದಾ ಭಾಸ್ಕರ ಭಟ್ ಪೌರೋಹಿತ್ಯದಲ್ಲಿ ಶುಕ್ರವಾರ ಸಂಜೆ ನಡೆಯಿತು....

Close