ಪ್ರೌಡ ಹಂತದ ಮಾಹಿತಿ ಕಾರ್ಯಕ್ರಮ

ಮೂಲ್ಕಿ: ವಿದ್ಯಾರ್ಥಿಗಳು ಪ್ರೌಡ ಹಂತದಲ್ಲಿ ಉನ್ನತ ವ್ಯಾಸಂಗದ ಗುರಿಯನ್ನು ನಿರ್ಧರಿಸಿ ಏಕಾಗ್ರತೆ ಮತ್ತು ಪರಿಶ್ರಮದಿಂದ ಶಿಕ್ಷಣ ಕೈಗೊಂಡಲ್ಲಿ ಮಾತ್ರ ಉನ್ನತ ಉದ್ಯೋಗಿಗಳು ಅಥವಾ ಉದ್ಯಮಿಯಾಗಿ ಸಮಾಜದ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ ಎಂದು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ವಿಭಾಗಾಧಿಕಾರಿ ಸ್ಮಿತಾ ಐತಾಳ್ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾನುವಾರ ಶ್ರೀ ನಾರಾಯಣ ಗುರು ಕ್ರಿಯಾ ಸಮಿತಿ ವಿದ್ಯಾರ್ಥಿಗಳಿಗಾಗಿ ನಡೆದ ಮಾಹಿತಿ ಕಾರ್ಯಕ್ರಮದ ಸಂಪ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವ್ಯಕ್ತಿತ್ವ ವಿಕಸನಕ್ಕಾಗಿ ಎನ್.ಸಿಸಿ ಎನ್‌ಎಸ್‌ಎಸ್ ಹಾಗೂ ಇತರ ವಿದ್ಯಾರ್ಥಿ ಸಂಘಗಳ ಮೂಲಕ ಧನಾತ್ಮಕವಾಗಿ ತೊಡಗಿಸಿಕೊಂಡು ತಮ್ಮ ಶೈಕ್ಷಣಿಕ ಪಠ್ಯ ಪೂರಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ನಾಯಕತ್ವಗುಣಗಳ ಗಳಿಕೆ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ.ಸಾಲ್ಯಾನ್ ವಹಿಸಿದ್ದರು. ಶ್ರೀ ನಾರಾಯಣಗುರು ಸಂಯುಕ್ತ ಪದವಿಪೂರ್ವ ಕಾಲೇಜಿನ ಸಂಚಾಲಕ ಎಚ್.ವಿ.ಕೋಟ್ಯಾನ್, ಮಹಿಳಾ ಮಂಡಳಿ ಅಧ್ಯಕ್ಷೆ ಸರಸ್ವತಿ ರಾಘು ಸುವರ್ಣ,ಉಪಾಧ್ಯಕ್ಷರಾದ ವಾಸು ಪೂಜಾರಿ, ಗೋಪೀನಾಥ ಪಡಂಗ,ಗೌ.ಪ್ರದಾನ ಕಾರ್ಯದರ್ಶಿ ರಮೇಶ್ ಕೊಕ್ಕರಕಲ್, ಖಜಾಂಜಿ ಪ್ರಕಾಶ ಸುವರ್ಣ ಹಾಗೂ ಸಂಘದ ಪೂರ್ವಾಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ನರೇಂದ್ರ ಕೆರೆಕಾಡು ಸ್ವಾಗತಿಸಿದರು. ರಮೇಶ್ ಕೊಕ್ಕರಕಲ್ ವಂದಿಸಿದರು.

Kinnigoli-10081405

Comments

comments

Comments are closed.

Read previous post:
Kinnigoli-10081404
ಗ್ರಾಮೀಣ ಕ್ರೀಡೆಗೂ ಆದ್ಯತೆ ನೀಡಿರಿ

ಮೂಲ್ಕಿ: ಶಿಕ್ಷಣ ಹಾಗೂ ಕ್ರೀಡೆಯನ್ನು ಸಮಾನವಾಗಿ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡಲ್ಲಿ, ಆತನ ಭವಿಷ್ಯದ ದಿನಗಳಲ್ಲಿ ಅದು ಸಹಕಾರಿ ಆಗುತ್ತದೆ. ಇಂದು ಕ್ರಿಕೇಟ್‌ಗೆ ಮಾತ್ರ ಮಾನ್ಯತೆ ಸಿಗುತ್ತಿದ್ದು ಹಳ್ಳಿ, ಹಳ್ಳಿಗಳಲ್ಲಿ...

Close