ಕಿನ್ನಿಗೋಳಿ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

ಕಿನ್ನಿಗೋಳಿ: ಯುಗಪುರುಷ ವಲಯದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಆಗಸ್ಟ್ 11, 12 ಹಾಗೂ 13ರಂದು ಜರಗಲಿದೆ. ಪ್ರತಿದಿನ ಪ್ರಾತಃಕಾಲ, ಮಧ್ಯಾಹ್ನ, ಸಾಯಂ. ತ್ರಿಕಾಲ ಪೂಜೆ, ರಥೋತ್ಸವ, ಪಲ್ಲಕಿ ಸೇವೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ತಾ.11ರಂದು ಬೆಳಿಗ್ಗೆ 10ರಿಂದ ಶ್ರೀ ಭ್ರಾಮರೀ ಮಹಿಳಾ ಭಜನಾ ಮಂಡಳಿ (ರಿ.) ಕಟೀಲು, ಸಂಜೆ 5.30ರಿಂದ ವಾಗ್ದೇವಿ ಭಜನಾ ಮಂಡಳಿ ಕಿನ್ನಿಗೋಳಿ ಇವರಿಂದ ಭಜನಾ ಕಾರ್ಯಕ್ರಮ, ಸಾಯಂ. ಗಂಟೆ 4ರಿಂದ ಧಾರ್ಮಿಕ ಸಭೆ, ತಾ. 12ರಂದು ಬೆಳಿಗ್ಗೆ 10ರಿಂದ ಶ್ರೀ ದೇವೀ ಭಜನಾ ಮಂಡಳಿ ಕಟೀಲು, ಸಾಯಂ.5ರಿಂದ ಶ್ರೀ ವಿಶ್ವನಾಥ ಭಜನಾ ಮಂಡಳಿ ಪುನರೂರು ಇವರಿಂದ ಭಜನಾ ಕಾರ್ಯಕ್ರಮ, ತಾ.13ರಂದು ಬೆಳಿಗ್ಗೆ 10ರಿಂದ ಶ್ರೀ ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು ಇವರಿಂದ ಭಜನೆ, ಸಾಯಂ.ಗಂಟೆ 5ರಿಂದ ಕಟೀಲು ಲಿಂಗಪ್ಪ ಶೇರಿಗಾರ ಮತ್ತು ಬಳಗದವರಿಂದ ನಾಗಸ್ವರ ವಾದನ ಮತ್ತು ಮೂವತ್ತೊಂದನೇ ವರ್ಷದ ಸಾರ್ವಜನಿಕ ಸಾಮೂಹಿಕ ಅಷ್ಟೋತ್ತರ ಶತ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವವು ಜರಗಲಿದೆಯೆಂದು ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-10081405
ಪ್ರೌಡ ಹಂತದ ಮಾಹಿತಿ ಕಾರ್ಯಕ್ರಮ

ಮೂಲ್ಕಿ: ವಿದ್ಯಾರ್ಥಿಗಳು ಪ್ರೌಡ ಹಂತದಲ್ಲಿ ಉನ್ನತ ವ್ಯಾಸಂಗದ ಗುರಿಯನ್ನು ನಿರ್ಧರಿಸಿ ಏಕಾಗ್ರತೆ ಮತ್ತು ಪರಿಶ್ರಮದಿಂದ ಶಿಕ್ಷಣ ಕೈಗೊಂಡಲ್ಲಿ ಮಾತ್ರ ಉನ್ನತ ಉದ್ಯೋಗಿಗಳು ಅಥವಾ ಉದ್ಯಮಿಯಾಗಿ ಸಮಾಜದ ಉನ್ನತ...

Close