ಕಿನ್ನಿಗೋಳಿ ವಲಯದ ಟೈಲರ‍್ಸ್ 14ನೇ ವಾರ್ಷಿಕೋತ್ಸವ

ಕಿನ್ನಿಗೋಳಿ: ಸಂಘಟನಾ ಶಕ್ತಿಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಸಮಾಜದ ಸದೃಡತೆಗೆ ಒತ್ತು ಕೊಡಬೇಕು. ಎಂದು ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್‌ನ ಜಿಲ್ಲಾ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಕೋಡಿಕಲ್ ಹೇಳಿದರು.
ಭಾನುವಾರ ಯುಗಪುರುಷ ಸಭಾ ಭವನದಲ್ಲಿ ನಡೆದ ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್ ಕಿನ್ನಿಗೋಳಿ ವಲಯದ ಹದಿನಾಲ್ಕನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ವಲಯ ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಟೈಲರಿಂಗ್‌ನಲ್ಲಿ ನಿವೃತ್ತಿ ಹೊಂದಿದ ಕೃಷ್ಣ ಎಲ್ ಶೆಟ್ಟಿಗಾರ್ ತಾಳಿಪಾಡಿ ಅವರನ್ನು ಕಿನ್ನಿಗೋಳಿ ವಲಯದ ವತಿಯಿಂದ ಸನ್ಮಾನಿಸಲಾಯಿತು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮೂಲ್ಕಿ ಮೂಡಬಿದ್ರೆ ಕ್ಷೇತ್ರಾಧ್ಯಕ್ಷ ಭಾಸ್ಕರ ಶೆಟ್ಟಿಗಾರ್, ಕಿನ್ನಿಗೋಳಿ ವಲಯ ಗೌರವಾಧ್ಯಕ್ಷ ಶಂಕರ್ ಬಿ. ಕೋಟ್ಯಾನ್, ಉಪಾಧ್ಯಕ್ಷೆ ತುಳಸಿ, ಸಂಘಟನಾ ಕಾರ್ಯದರ್ಶಿ ಲಲಿತಾ ಭಾಸ್ಕರ್, ಉಪಸ್ಥಿತರಿದ್ದರು.
ಮೋಹನ್ ಎಸ್.ಕೋಡಿ ವಂದಿಸಿದರು, ಕಿನ್ನಿಗೋಳಿ ವಲಯ ಕಾರ್ಯದರ್ಶಿ ರಾಜರಾಮ್ ಹಾಗೂ ವಿಶ್ವನಾಥ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-11081404

Comments

comments

Comments are closed.

Read previous post:
Kinnigoli-11081403
ಭ್ರಾಮರೀ ಮಹಿಳಾ ಸಮಾಜ : ಆಟಿಡೊಂಜಿ ದಿನ

ಕಿನ್ನಿಗೋಳಿ: ಮಹಿಳೆಯರು ವೈಜ್ಞಾನಿಕ ರೀತಿಯ ಹಳೆಯ ಆಚರಣೆಗಳನ್ನು ಉಳಿಸಿ ಬೆಳೆಸಿ ಮುಂದಿನ ಯುವ ಪೀಳಿಗೆಗೆ ತಿಳಿ ಹೇಳುವ ಕಾರ್ಯ ಮಾಡಬೇಕಾಗಿದೆ. ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡುಗೋಡು ಸೇವಾಪ್ರತಿನಿಧಿ...

Close