ರೋಟರಿ ಸದಸ್ಯರಿಂದ ರಂಝಾನ್ ಕೂಟ

ಮೂಲ್ಕಿ: ಪ್ರಪಂಚದ ನಿರ್ಮಾತನಾದ ಭಗವಂತನ್ನು ಪ್ರಾರ್ಥಿಸುವುದರೊಂದಿಗೆ ನಡೆಸುವ ಉಪವಾಸ ವೃತವು ನಮ್ಮನ್ನು ದೈಹಿಕ ಮತ್ತು ಮಾನಸಿಕವಾಗಿ ಶುದ್ದೀಕರಿಸಿ ಇಹ ಮತ್ತು ಪರದಲ್ಲಿ ಉನ್ನತಿಗಳಿಸುವಂತೆ ಮಾಡುತ್ತದೆ ಎಂದು ಮೂಲ್ಕಿ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಹಾಜಿ ಉಮ್ಮರ್ ಫೈಜಿ ಹೇಳಿದರು. ಅವರು ಮೂಲ್ಕಿ ರೋಟರಿ ಕ್ಲಬ್ ಸದಸ್ಯರಿಂದ ನಡೆದ ರಂಝಾನ್ ಹಬ್ಬದ ಸಂತೋಷ ಕೂಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ದೇವರು ಒಬ್ಬನೇ ಅವನೊಬ್ಬನೇ ಪೂಜೆ ಅರ್ಹನು ಎಂಬ ತಿಳುವಳಿಕೆಯೊಂದಿಗೆ ಆತನ ಸೃಷ್ಠಿಯ ಬಿಂದುಗಳಾದ ನಾವು ಒಬ್ಬರಿಗೊಬ್ಬರು ಸಹಕಾರಿಯಾಗಿ ಸಂಘಟಿತರಾಗಿ ಬದುಕುವುದು ಪವಿತ್ರ ಕುರಾನ್ ತತ್ವವಾಗಿದೆ ಎಂದರು.
ಮೂಲ್ಕಿ ರೋಟರಿಯ ಅಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು ಸಹಾಯಕ ರಾಜ್ಯಪಾಲ ಎಂ.ಜಿ.ನಾಗೇಂದ್ರ,ಜೋನಲ್ ಲೆಪ್ಟಿನೆಂಟ್ ಶರತ್ ಶೆಟ್ಟಿ, ಕಾರ್ಯದರ್ಶಿ ವಿಲ್‌ಹೆಲ್ಮ್ ಮಾಬೆನ್,ಪೂವಾಧ್ಯಕ್ಷ ಅಬ್ದುಲ್ ಹೆಮಾನ್ ಉಪಸ್ಥಿತರಿದ್ದರು.
ಅಬ್ದುಲ್ ರೆಹೆಮಾನ್ ಸ್ವಾಗತಿಸಿದರು.ಜೋಯಲ್ ಡಿಸೋಜಾ ನಿರೂಪಿಸಿದರು. ವಿಲ್‌ಹೆಲ್ಮ್ ಮಾಬೆನ್ ವಂದಿಸಿದರು.

Kinnigoli-12081401

Bhagyavan Sanil

Comments

comments

Comments are closed.

Read previous post:
Kinnigoli-11081406
ಮಳೆಹಾನಿ ಧನ ಸಹಾಯ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದ ಮೂರು ಮನೆಯವರಿಗೆ ಪಂಚಾಯಿತಿ ವತಿಯಿಂದ ಧನ ಸಹಾಯವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ವಿತರಿಸಿದರು...

Close